ದೇಗುಲಗಳ ನಗರಿ ಉಜ್ಜಯನಿಯಲ್ಲಿ ಕೇವಲ 10 ನಿಮಿಷದಲ್ಲಿ ಬೆಳಗಿದ 11.71 ಲಕ್ಷ ದೀಪಗಳು…! ಗಿನ್ನಿಸ್ ದಾಖಲೆಗೆ ಪಾತ್ರವಾಯ್ತು ʼಅರ್ಪಣಂ ಮಹೋತ್ಸವʼ 02-03-2022 3:45PM IST / No Comments / Posted In: India, Featured News, Live News ಮಹಾಶಿವರಾತ್ರಿಯ ಅಂಗವಾಗಿ ಮಧ್ಯಪ್ರದೇಶದ ದೇಗುಲಗಳ ಪಟ್ಟಣವಾದ ಉಜ್ಜಯಿನಿಯಲ್ಲಿ ಶಿವಜ್ಯೋತಿ ಅರ್ಪಣಂ ಮಹೋತ್ಸವದ ಅಂಗವಾಗಿ ಬರೋಬ್ಬರಿ 11.71 ಲಕ್ಷ ಮಣ್ಣಿನ ದೀಪಗಳನ್ನು ಕೇವಲ 10 ನಿಮಿಷಗಳಲ್ಲಿ ಬೆಳಗುವ ಮೂಲಕ ಗಿನ್ನೆಸ್ ದಾಖಲೆಯನ್ನು ನಿರ್ಮಿಸಲಾಗಿದೆ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನ ಐವರು ಸದಸ್ಯರ ನಿಯೋಗವು ಈ ಬೃಹತ್ ಪ್ರಯತ್ನವನ್ನು ಪರಿಶೀಲನೆ ಮಾಡಿದ ಬಳಿಕ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ರಿಗೆ ವಿಶ್ವ ದಾಖಲೆಯ ನಿರ್ಮಿಸಿದ ಬಗ್ಗೆ ಪ್ರಮಾಣ ಪತ್ರವನ್ನು ನೀಡಿದೆ. ಗಿನ್ನೆಸ್ ದಾಖಲೆ ನಡೆಯುವ ಸ್ಥಳದಲ್ಲಿ ಐದು ಡ್ರೋನ್ ಕ್ಯಾಮರಾಗಳನ್ನು ನಿಯೋಜಿಸಲಾಗಿತ್ತು. ಪತ್ನಿ ಸಾಧನಾ ಸಿಂಗ್ ಜೊತೆ ಸೇರಿ 11 ದೀಪಗಳನ್ನು ಬೆಳಗಿಸುವ ಮೂಲಕ ವಿಶ್ವ ದಾಖಲೆಯ ಕಾರ್ಯಕ್ಕೆ ಮಧ್ಯಪ್ರದೇಶ ಸಿಎಂ ಶಿವರಾಜ ಸಿಂಗ್ ಚೌಹಾಣ್ ಚಾಲನೆಯನ್ನು ನೀಡಿದರು. ಇದಾದ ಬಳಿಕ ಸಾವಿರಾರು ಸ್ವಯಂ ಸೇವಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.