ಹಿಂದು ಕುಟುಂಬದಲ್ಲಿ ಪ್ರತಿದಿನ ದೇವರ ಪೂಜೆ ಮಾಡಲಾಗುತ್ತದೆ. ನಿಯಮ ತಪ್ಪದೇ ಭಕ್ತರು ದೇವರಿಗೆ ಪೂಜೆ ಮಾಡಿ, ಆಯುಷ್ಯ, ಆರೋಗ್ಯ ನೀಡುವಂತೆ ಬೇಡಿಕೊಳ್ಳುತ್ತಾರೆ. ಆದರೆ ಪೂಜೆ ಮಾಡುವ ವಿಧಾನ ಎಲ್ಲರಿಗೂ ಸರಿಯಾಗಿ ತಿಳಿದಿಲ್ಲ.
ಹಿಂದು ಧರ್ಮಗ್ರಂಥದಲ್ಲಿ ಪೂಜೆಯನ್ನು ಹೇಗೆ ಮಾಡಬೇಕೆಂದು ಹೇಳಲಾಗಿದೆ. ಇದು ಬಹಳ ಮಹತ್ವ ಕೂಡ ಪಡೆದಿದೆ.
ಜೀವನದಲ್ಲಿ ಸದಾ ಖುಷಿ ಬಯಸುವವರು ಸೂರ್ಯ, ಗಣೇಶ, ದುರ್ಗೆ, ಶಿವ, ವಿಷ್ಣು ಈ ಐದು ದೇವರನ್ನು ಪೂಜಿಸಬೇಕು. ಯಾವುದೇ ಶುಭ ಕಾರ್ಯ ಮಾಡುವ ಮೊದಲು ಈ ದೇವರ ಪೂಜೆ ಮಾಡಲೇಬೇಕು.
ʼವ್ಯಾಕ್ಸಿಂಗ್ʼ ಮಾಡಿದ ತಕ್ಷಣ ಅಪ್ಪಿತಪ್ಪಿ ಮಾಡಬೇಡಿ ಈ ಕೆಲಸ
ಶಿವನ ಪೂಜೆ ಮಾಡುವಾಗ ಎಂದೂ ಕೇತಕಿ ಹೂವನ್ನು ಬಳಸಬಾರದು. ಸೂರ್ಯನ ಪೂಜೆಗೆ ಅಗಸ್ತ್ಯ ಹೂ ಬಳಸಬಾರದು.
ಬೆಳಿಗ್ಗೆ ಸ್ನಾನ ಮಾಡಿದ ನಂತರ, ದೇವರಿಗೆ ಹೂ ಅಥವಾ ತುಳಸಿಯನ್ನು ಕೀಳಬೇಕು. ವಾಯುಪುರಾಣದ ಪ್ರಕಾರ, ಸ್ನಾನಕ್ಕಿಂತ ಮೊದಲು ಹೂ ಕಿತ್ತರೆ ಅದರಿಂದ ಫಲ ಸಿಗುವುದಿಲ್ಲ.
ಪೂಜೆ ಮಾಡುವ ಸ್ಥಳದ ಮೇಲುಗಡೆ ಭಾರವಾದ ಯಾವುದೇ ವಸ್ತುಗಳನ್ನು ಇಡಬಾರದು. ಅಲ್ಲದೇ ಆ ಸ್ಥಳಕ್ಕೆ ಚಪ್ಪಲಿ ಧರಿಸಿಕೊಂಡು ಹೋಗಬಾರದು. ಚರ್ಮದ ವಸ್ತುಗಳನ್ನು ದೇವರ ಬಳಿ ಇಟ್ಟು ಪೂಜೆ ಮಾಡಬಾರದು.
ವಿಷ್ಣುವನ್ನು ಸಂತೃಪ್ತಗೊಳಿಸಲು ಹಳದಿ ಬಣ್ಣದ ರೇಷ್ಮೆ ಬಟ್ಟೆಯನ್ನು ಅರ್ಪಿಸಬೇಕು. ದುರ್ಗಿ, ಸೂರ್ಯ, ಗಣೇಶ ದೇವರಿಗೆ ಕೆಂಪು ಹಾಗೂ ಶಿವನಿಗೆ ಬಿಳಿ ಬಣ್ಣದ ವಸ್ತ್ರವನ್ನು ಅರ್ಪಿಸಬೇಕು.