ಮನೆಯ ಸದಸ್ಯರು ಪದೇ ಪದೇ ಅನಾರೋಗ್ಯಕ್ಕೊಳಗಾಗ್ತಿದ್ದರೆ, ಮನಸ್ಸು ಅಸಂತೋಷದಿಂದ ಕೂಡಿದ್ದರೆ, ಮಕ್ಕಳು ಹಾಲು ಕುಡಿಯದಿದ್ದಲ್ಲಿ, ಕೆಲಸದಲ್ಲಿ ಅಡೆತಡೆಯಾದ್ರೆ ಸಾಮಾನ್ಯವಾಗಿ ಯಾರದ್ದೋ ದೃಷ್ಟಿ ತಗುಲಿದೆ ಎನ್ನುತ್ತಾರೆ ಹಿರಿಯರು.
ದೃಷ್ಟಿ ಬಿದ್ದಾಗ ಕೆಲವೊಂದು ಉಪಾಯಗಳನ್ನು ಅನುಸರಿಸಿದ್ರೆ ಸುಲಭವಾಗಿ ದೃಷ್ಟಿಯ ಪ್ರಭಾವ ಕಡಿಮೆಯಾಗುತ್ತದೆ.
ದೃಷ್ಟಿ ತಗುಲಿದೆ ಎನ್ನುವ ಅನುಮಾನ ಬಂದ್ರೆ ಹನುಮಾನ್ ಚಾಲೀಸ್ ಅಥವಾ ಸುಂದರ ಕಾಂಡವನ್ನು ಓದಲು ಶುರುಮಾಡಿ. ಕೆಲವೇ ದಿನಗಳಲ್ಲಿ ಧನಾತ್ಮಕ ಶಕ್ತಿ ಪ್ರಭಾವ ಹೆಚ್ಚಾಗಲು ಶುರುವಾಗುತ್ತದೆ.
ಒಂದು ಸ್ವಚ್ಛ ಬಟ್ಟೆಯಲ್ಲಿ ಹನುಮಂತನ ಕಾಲಿಗೆ ಹಾಕಿರುವ ಕುಂಕುಮ, ಒಂದು ಗ್ರಾಂ ಕಪ್ಪು ಎಳ್ಳು, ಒಂದು ಗ್ರಾಂ ಕಪ್ಪು ಉದ್ದು, ಒಂದು ಕಬ್ಬಿಣದ ಚೂರು, ಮೂರು ಕೆಂಪು ಮೆಣಸನ್ನು ಹಾಕಿ. ದೃಷ್ಟಿ ಬಿದ್ದ ವ್ಯಕ್ತಿಗೆ ಕಣ್ಣಿಗೆ ಕಾಣುವಂತೆ ಅದನ್ನು ಇಡಿ. 25 ಗಂಟೆ ನಂತ್ರ ಅದನ್ನು ನದಿಯಲ್ಲಿ ತೇಲಿ ಬಿಡಿ.
ಮಗುವಿನ ಬೆಳವಣಿಗೆ ನಿಂತಿದೆ. ಮಗುವಿಗೆ ದೃಷ್ಟಿ ಬಿದ್ದಿದೆ ಎಂದಾದ್ರೆ ಅಲುಮ್ ಹಾಗೂ ಸಾಸಿವೆಯನ್ನು ತೆಗೆದುಕೊಂಡು ಮಗುವಿಗೆ ದೃಷ್ಟಿ ಬಳಿದು ಹೊರಗೆ ಹಾಕಿ.
ತಾಮ್ರದ ಲೋಟದಲ್ಲಿ ನೀರು ಹಾಗೂ ತಾಜಾ ಹೂವನ್ನು ಹಾಕಿ ಮಗುವಿಗೆ 11 ಬಾರಿ ದೃಷ್ಟಿ ತೆಗೆಯಿರಿ.
ಬೆಳ್ಳುಳ್ಳಿ, ಸಾಸಿವೆ, ಉಪ್ಪು, ಈರುಳ್ಳಿ ಸಿಪ್ಪೆ ಮತ್ತು ಒಣ ಕೆಂಪು ಮೆಣಸಿನಕಾಯಿ ಹಾಗೂ ಕೂದಲನ್ನು ತೆಗೆದುಕೊಂಡು ಮಗುವಿಗೆ ಏಳು ಬಾರಿ ಸುತ್ತಿ ನಂತ್ರ ಬೆಂಕಿಗೆ ಹಾಕಿ. ಮೆಣಸನ್ನು ಬೆಂಕಿಗೆ ಹಾಕಿದ್ರೂ ವಾಸನೆ ಬರದೆ ಹೋದಲ್ಲಿ ದೃಷ್ಟಿ ಬಿದ್ದಿದೆ ಎಂದೇ ಅರ್ಥ.
ನಿಂಬೆ ಹಣ್ಣಿನ ಮೂಲಕ ಕೂಡ ದೃಷ್ಟಿ ತೆಗೆಯಬಹುದು. ನಿಂಬೆ ಹಣ್ಣನ್ನು ದೃಷ್ಟಿ ಬಿದ್ದ ವ್ಯಕ್ತಿಯ ತಲೆಯಿಂದ ಕಾಲಿನವರೆಗೆ 7 ಬಾರಿ ಸುತ್ತಿ ನಂತ್ರ ನಿಂಬೆ ಹಣ್ಣನ್ನು ನಾಲ್ಕು ಭಾಗವಾಗಿ ಕತ್ತರಿಸಿ ನಿರ್ಜನ ಪ್ರದೇಶದಲ್ಲಿ ಎಸೆಯಿರಿ.