ದೂರ ಶಿಕ್ಷಣದ ಮೂಲಕ ಪದವಿ ಪಡೆದ ಅಭ್ಯರ್ಥಿಗಳಿಗೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಗುಡ್ ನ್ಯೂಸ್ ನೀಡಿದೆ. ಇಂತಹ ಪದವಿಗಳು ಸಾಮಾನ್ಯವಾಗಿ ಪಡೆಯುವ ಸಾಂಪ್ರದಾಯಿಕ ಪದವಿಗಳಿಗೆ ಸಮಾನ ಎಂದು ಆದೇಶಿಸಿದೆ.
ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳ ಮೂಲಕ ಮುಕ್ತ ವಿಶ್ವವಿದ್ಯಾಲಯಗಳಲ್ಲಿ ಪಡೆಯುವ ದೂರ ಶಿಕ್ಷಣ ಅಥವಾ ಆನ್ಲೈನ್ ಪದವಿಗಳನ್ನು ಸಾಂಪ್ರದಾಯಿಕ ಪದವಿಗಳಿಗೆ ಸಮಾನವಾಗಿ ಪರಿಗಣಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಉನ್ನತ ಶಿಕ್ಷಣ ಇಲಾಖೆ ಮೂಲಕ ನಡೆಸಲಾಗುವ ದೂರ ಶಿಕ್ಷಣ ಅಥವಾ ಆನ್ಲೈನ್ ಪದವಿಗಳನ್ನು ಪಡೆದ ಸ್ನಾತಕೋತ್ತರ ಡಿಪ್ಲೋಮೋ ಕೋರ್ಸ್ ಗಳನ್ನು ಸಾಂಪ್ರದಾಯಿಕ ಪದವಿಗೆ ಸಮಾನ ಎಂದು ಪರಿಗಣಿಸಲು ಯುಜಿಸಿ ಆದೇಶ ಹೊರಡಿಸಿದೆ.