ಬೆಂಗಳೂರು: ಆರ್.ಎಸ್.ಎಸ್. ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆ ಬೆನ್ನಲ್ಲೇ ತಿರುಗೇಟು ನೀಡಿರುವ ನಟ ಜಗ್ಗೇಶ್, ನಾನು ಕಂಡ ಆರ್.ಎಸ್.ಎಸ್ ಜಾತಿ, ಧರ್ಮ ಮೀರಿದ ಮಾತೃಹೃದಯಿ ಸಂಘಟನೆ. ಅದರ ಕಾರ್ಯಕರ್ತರು ಕರ್ಮಯೋಗಿಗಳಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೋವಿಡ್ ಸಂದರ್ಭದಲ್ಲಾಗಲಿ, ನೆರೆ ಸಂದರ್ಭದಲ್ಲಾಗಲಿ, ರಾಷ್ಟ್ರಕ್ಕೆ ಸಂಕಷ್ಟ ಬಂದಾಗ ಆಗಲಿ, ವಿದ್ಯೆ ದಾನಕ್ಕಾಗಲಿ, ಅನ್ನದ ಮಾರ್ಗಕ್ಕಾಗಲಿ, ಶಿಸ್ತಿನ ಸೈನ್ಯ..ಸ್ವಾರ್ಥ ಜಗದಲ್ಲಿ ನಿಸ್ವಾರ್ಥ ಸೇವೆ ಮಾಡುವ ಸಂಸ್ಥೆ ಎಂದರೆ ಅದು ಆರ್.ಎಸ್.ಎಸ್. ಯಾರಿಗೆ ಆ ಸಂಸ್ಥೆಯ ಸಂಪರ್ಕ ದೊರೆತಿದೆ ಅಂಥವರು ತಮಗರಿಯದೇ ಸ್ವಾತ್ವಿಕನಾಗಿ ಸ್ವಾರ್ಥ ಬಿಟ್ಟು ಸಮಾಜಕ್ಕೆ ಹೆಗಲು ಕೊಡುವ ಕರ್ಮಯೋಗಿ ಆಗುತ್ತಾನೆ ಎಂದು ಸರಣಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಫೇಸ್ ಬುಕ್, ವಾಟ್ಸಾಪ್ ಸ್ಥಗಿತದ ಬಳಿಕ ‘ಟೆಲಿಗ್ರಾಂ’ಗಾದ ಲಾಭವೆಷ್ಟು ಗೊತ್ತಾ…..? ಇಲ್ಲಿದೆ ಇಂಟ್ರಸ್ಟಿಂಗ್ ವಿವರ
ದೂರ ನಿಂತು ಬೆಟ್ಟ ನೋಡುವುದಕ್ಕೂ ಆ ಬೆಟ್ಟ ಏರಿದವರಿಗೂ ವಿವರಣೆಗೆ ವ್ಯತ್ಯಾಸವಿದೆ…! ನೋಡುಗರಿಗಿಂತ ಅದರ ಸಾಂಗತ್ಯ ಇರುವವರ ಸಂಖ್ಯೆ ಹೆಚ್ಚು. ಕಾರಣ ಮಾತೃರೂಪ ಹಾಗೂ ಸರ್ವಸಂಗ ಪರಿತ್ಯಾಗಿಗಳು ಕಟ್ಟಿದ ನಿಸ್ವಾರ್ಥ. ಆ ಸಂಘದಲ್ಲಿ ಅದರ ಸಿದ್ಧಾಂತ ಅಪ್ಪಿ ಜೀವಿಸುವವರು ವಿದ್ಯಾವಂತರು, ರಾಷ್ಟ್ರಪ್ರೇಮಿಗಳು, ಆತ್ಮಸಾಕ್ಷಾತ್ಕಾರ ಆದ ಶ್ವೇತವರ್ಣ ಸನ್ಯಾಸಿಗಳು…ಅವರಿಗೆ ದೇಶವೇ ಮನೆ, ದೇಶವಾಸಿಗಳೆ ಬಂಧುಗಳು, ನಿಸ್ವಾರ್ಥ ಸಮಾಜಸೇವೆಯೇ ದೇವರ ಪೂಜೆ…ಸಂಘದ ಬಗ್ಗೆ ಮಾತನಾಡುವ ಮೊದಲು ನಿಸ್ವಾರ್ಥದ ಗುಣ ಅರಿಯಿರಿ ಎಂದು ಜಗ್ಗೇಶ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.