_(Copy).jpg.jpg?1458195742)
ಪಣಜಿ: ದೇಶದ ಅತ್ಯಂತ ಎತ್ತರದ ಜಲಪಾತಗಳಲ್ಲಿ ಒಂದಾದ ಕರ್ನಾಟಕ-ಗೋವಾ ಗಡಿಯಲ್ಲಿರುವ ದೂಧ್ ಸಾಗರ್ ಜಲಪಾತ ಮಳೆಯ ನಡುವೆ ಇನ್ನಷ್ಟು ರುದ್ರ ರಮಣೀಯವಾಗಿ ಧುಮ್ಮಿಕ್ಕಿ ಹರಿಯುತ್ತಿದೆ. ಜಲಪಾತದ ಪ್ರಕೃತಿ ಸೌಂದರ್ಯ ವೀಕ್ಷಿಸಲು ಟ್ರೆಕಿಂಗ್ ಗೆ ತೆರಳಿದ್ದ ಯುವಕರಿಗೆ ಪೊಲೀಸರು ಬಸ್ಕಿ ಶಿಕ್ಷೆ ನೀಡಿ ವಾಪಸ್ ಕಳುಹಿಸಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ದೂಧ್ ಸಾಗರ್ ಜಲಪಾತಕ್ಕೆ ಪ್ರವಾಸಕ್ಕೆ ತೆರಳಿದ್ದ ಯುವಕರ ಗುಂಪು ರೈಲ್ವೆ ಟ್ರ್ಯಾಕ್ ಮೇಲೆಯೇ ನಡೆದು ಸಾಗಿದ್ದಾರೆ. ಇದನ್ನು ಗಮನಿಸಿದ ರೈಲ್ವೆ ಪೊಲೀಸರು ಯುವಕರನ್ನು ಅರ್ಧದಲ್ಲೇ ತಡೆದು ನಿಲ್ಲಿಸಿ, ಬಸ್ಕಿ ಶಿಕ್ಷೆ ವಿಧಿಸಿದ್ದಾರೆ.
ನೂರಾರು ಯುವಕರು ಬಸ್ಕಿ ಹೊಡೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಸ್ಕಿ ಶಿಕ್ಷೆ ಬಳಿಕ ಯುವಕರನ್ನು ವಾಪಸ್ ಕಳುಹಿಸಿದ್ದಾರೆ.
ಈ ನಡುವೆ ದೂಧ್ ಸಾಗರ್ ಪ್ರವಾಸಕ್ಕೆ ತೆರಳದಂತೆ ಗೋವಾ ಸರ್ಕಾರ ಇಂದಿನಿಂದ ನಿರ್ಬಂಧ ವಿಧಿಸಿದೆ. ಮಳೆ ಹಾಗೂ ಸುರಕ್ಷತೆ ಕಾರಣಕ್ಕಾಗಿ ಪ್ರವಾಸಿಗರಿಗೆ ದೂಧ್ ಸಾಗರ್ ಪ್ರವಾಸ ಬ್ಯಾನ್ ಮಾಡಲಾಗಿದೆ.