ರಾಜ್ಯದ 19 ಸೇತುವೆಗಳು ದುರಸ್ತಿ ಹಾಗೂ ಪುನರ್ ನಿರ್ಮಾಣಕ್ಕೆ ಕಾದಿದ್ದು, ಈ ಕುರಿತಂತೆ ಕೇಂದ್ರ ಹೆದ್ದಾರಿ ಹಾಗೂ ಸಾರಿಗೆ ಸಚಿವಾಲಯ ಮಾಹಿತಿ ನೀಡಿದೆ. ಈ ಪೈಕಿ ಕೆಲವೊಂದು ಸೇತುವೆಗಳು ತುರ್ತಾಗಿ ದುರಸ್ತಿ ಮಾಡಬೇಕಿದೆ ಎಂದು ಸಚಿವಾಲಯ ತಿಳಿಸಿದೆ.
ಈ ಪಟ್ಟಿಯಲ್ಲಿ ಬೆಂಗಳೂರು – ನೆಲಮಂಗಲ ನಡುವಿನ ಪೀಣ್ಯ ಮೇಲ್ಸೇತುವೆಯೂ ಸೇರಿದ್ದು, ದುರಸ್ತಿ ಅಥವಾ ಪುನರ್ ನಿರ್ಮಾಣಕ್ಕೆ ಗುರುತಿಸಲಾದ 19 ಸೇತುವೆಗಳ ಪೈಕಿ ಕೆಲವೊಂದು ತೀರಾ ಹಳೆಯದಾಗಿರುವ ಕಾರಣ ಮರು ನಿರ್ಮಾಣ ಮಾಡಬೇಕೆಂದು ಹೇಳಲಾಗಿದೆ.
ದುರಸ್ತಿಗೆ ಕಾದಿರುವ 19 ಹಳೆಯ ಸೇತುವೆಗಳ ಪಟ್ಟಿ ಇಂತಿದೆ.
ಮೈಸೂರು ಜಿಲ್ಲೆಯ ಹೆದ್ದಾರಿ 212 ರಲ್ಲಿ ಕಬಿನಿ ನದಿಯ ಪ್ರಮುಖ ಸೇತುವೆ.
ಬೆಂಗಳೂರು ನಗರ ಜಿಲ್ಲೆಯ ಹೆದ್ದಾರಿ 42 ರಲ್ಲಿ ಬೆಂಗಳೂರು – ನೆಲಮಂಗಲ ನಡುವಿನ ಮೇಲ್ಸೇತುವೆ.
ಶಿವಮೊಗ್ಗ ಜಿಲ್ಲೆಯ ಹೆದ್ದಾರಿ 206 ರಲ್ಲಿ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿರುವ ತುಂಗಾ ಸೇತುವೆ.
ಶಿವಮೊಗ್ಗ ಜಿಲ್ಲೆಯ ಹೆದ್ದಾರಿ 13ರಲ್ಲಿ ಹೊಳೆಹೊನ್ನೂರು ಸಮೀಪದ ಸೇತುವೆ.
ರಾಯಚೂರು ಜಿಲ್ಲೆಯ ಹೆದ್ದಾರಿ 167 ರಲ್ಲಿ ಹಗರಿ ಜಡ್ಜೆರ್ಲಾ ಭಾಗದಲ್ಲಿ ಕೃಷ್ಣಾ ನದಿಗೆ ನಿರ್ಮಿಸಿರುವ ಪ್ರಮುಖ ಸೇತುವೆ.
ರಾಯಚೂರು ಜಿಲ್ಲೆಯ ಹೆದ್ದಾರಿ 150 ಎ ಯಲ್ಲಿರುವ (ಜೇವರ್ಗಿ – ಚಾಮರಾಜನಗರ) ಪ್ರಮುಖ ಸೇತುವೆ.
ಬೆಳಗಾವಿ ಜಿಲ್ಲೆಯ ಹೆದ್ದಾರಿ 63ರ 112.3 ಕಿಮೀಯಲ್ಲಿರುವ ಸೇತುವೆ.
ಗದಗ ಜಿಲ್ಲೆಯ ಹೆದ್ದಾರಿ 218ರ ಮಲಪ್ರಭಾ ಸೇತುವೆ.
ಶಿವಮೊಗ್ಗ ಜಿಲ್ಲೆಯ ಹೆದ್ದಾರಿ 766 ಸಿ ಯಲ್ಲಿರುವ 7 ಸಣ್ಣ ಸೇತುವೆಗಳು.
ಶಿವಮೊಗ್ಗ ಜಿಲ್ಲೆಯ ಹೆದ್ದಾರಿ 206ರ ತುಂಗಾ ನದಿಯ ಸೇತುವೆ.
ಶಿವಮೊಗ್ಗ ಜಿಲ್ಲೆಯ ಹೆದ್ದಾರಿ 169ರ ತುಂಗಾ ನದಿಯ ಸೇತುವೆ.
ತುಮಕೂರು ಜಿಲ್ಲೆಯ ಹೆದ್ದಾರಿ 234ರ ಸಣ್ಣ ಸೇತುವೆ.
ಮೈಸೂರು ಜಿಲ್ಲೆಯ ಹೆದ್ದಾರಿ 275ರಲ್ಲಿ ಲಕ್ಷ್ಮಣ ತೀರ್ಥ ನದಿಯ ಪ್ರಮುಖ ಸೇತುವೆ.
ರಾಯಚೂರು ಜಿಲ್ಲೆಯ ಹೆದ್ದಾರಿ 150 ಎ ಯಲ್ಲಿರುವ (ಜೇವರ್ಗಿ – ಚಾಮರಾಜನಗರ) ಕಿರಿದಾದ ಸೇತುವೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಶರಾವತಿ ನದಿಗೆ ಕಟ್ಟಿರುವ ಸೇತುವೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕೂಳೂರಿನಲ್ಲಿ ಫಲ್ಗುಣಿ ನದಿಯ ಸೇತುವೆ.
ಚಿಕ್ಕಮಗಳೂರು ಜಿಲ್ಲೆಯ ಶೋಲಾಪುರ – ಮಂಗಳೂರು ಹೆದ್ದಾರಿ 169 ರ ಪ್ರಮುಖ ಸೇತುವೆ ಹಾಗೂ 5 ಸಣ್ಣ ಸೇತುವೆಗಳು.
ಉಡುಪಿ ಜಿಲ್ಲೆಯ ತೀರ್ಥಹಳ್ಳಿ – ಉಡುಪಿ ಹೆದ್ದಾರಿಯ ಪ್ರಮುಖ ಸೇತುವೆ.
ಶಿವಮೊಗ್ಗ ಜಿಲ್ಲೆಯ ಶರಾವತಿ ಹಿನ್ನೀರು ಮತ್ತು ಸಿಗಂದೂರು ಬಳಿಯ ಅಂಬರಗೋಡು ಮತ್ತು ಕಳಸವಳ್ಳಿ ನಡುವಿನ ಸೇತುವೆ.