ಭಾರತದ ಎರಡನೇ ಶ್ರೀಮಂತ ಎನಿಸಿಕೊಂಡಿರೋ ಮುಕೇಶ್ ಅಂಬಾನಿ ದುಬೈನಲ್ಲಿ ತಮ್ಮ ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಿಸುತ್ತಿದ್ದಾರೆ. ಅತ್ಯಂತ ದುಬಾರಿ ಬೀಚ್ ಸೈಡ್ ವಿಲ್ಲಾ ಒಂದನ್ನು ಖರೀದಿಸಿದ್ದಾರೆ. ಇದು ದುಬೈನ ಅತ್ಯಂತ ದುಬಾರಿ ವಿಲ್ಲಾ ಎಂದೇ ಬಣ್ಣಿಸಲಾಗ್ತಿದೆ. ಈ ಮೂಲಕ ಮುಖೇಶ್ ಅಂಬಾನಿ ಮತ್ತೊಂದು ಹೊಸ ದಾಖಲೆ ಬರೆಯುತ್ತಿದ್ದಾರೆ.
ಮುಖೇಶ್ ಅಂಬಾನಿ ಕಳೆದ ವಾರ ಕುವೈತ್ ಉದ್ಯಮಿ ಮೊಹಮ್ಮದ್ ಅಲ್ಶಯಾ ಅವರ ಕುಟುಂಬದಿಂದ ಸುಮಾರು 163 ಮಿಲಿಯನ್ ಡಾಲರ್ ಮೊತ್ತದ ಪಾಮ್ ಜುಮೇರಾ ಮಹಲನ್ನು ಕೊಂಡುಕೊಂಡಿದ್ದಾರೆ. ಅಲ್ಶಯಾ ಸಂಘಟನೆ ಸ್ಟಾರ್ಬಕ್ಸ್, H&M ಮತ್ತು ವಿಕ್ಟೋರಿಯಾಸ್ ಸೀಕ್ರೆಟ್ ಸೇರಿದಂತೆ ಹಲವು ಬ್ರ್ಯಾಂಡ್ಗಳ ಸ್ಥಳೀಯ ಫ್ರಾಂಚೈಸಿಗಳನ್ನು ಹೊಂದಿದೆ. ಮುಖೇಶ್ ಅಂಬಾನಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಅಧ್ಯಕ್ಷರು. ಮಾರುಕಟ್ಟೆ ಮೌಲ್ಯದ ಪ್ರಕಾರ ಭಾರತದ ಅತಿದೊಡ್ಡ ಕಂಪನಿ ಇದು.
ರಿಲಯನ್ಸ್ ಇಂಡಸ್ಟ್ರೀಸ್ನ ನಿವ್ವಳ ಮೌಲ್ಯ 84 ಬಿಲಿಯನ್ ಡಾಲರ್. ಮುಖೇಶ್ ಅಂಬಾನಿ ಈಗ ವಿದೇಶಗಳಲ್ಲೂ ಅಪಾರ ಆಸ್ತಿ ಪಾಸ್ತಿಯನ್ನು ಸಂಪಾದಿಸಿದ್ದಾರೆ. ಬ್ರಿಟನ್ನ ಕಂಟ್ರಿ ಕ್ಲಬ್ ಸ್ಟೋಕ್ ಪಾರ್ಕ್ ಅನ್ನು ಖರೀದಿಸಲು ರಿಲಯನ್ಸ್ ಕಳೆದ ವರ್ಷ 79 ಮಿಲಿಯನ್ ಡಾಲರ್ ಖರ್ಚು ಮಾಡಿದೆ. ಅಂಬಾನಿ ನ್ಯೂಯಾರ್ಕ್ನಲ್ಲೂ ಹೂಡಿಕೆ ಮಾಡುವ ಸಿದ್ಧತೆಯಲ್ಲಿದ್ದಾರಂತೆ. ದುಬೈನಲ್ಲಿ ಕೊಂಡುಕೊಂಡಿರೋ ಮಹಲು ಪಾಮ್-ಆಕಾರದ ದ್ವೀಪದಲ್ಲಿದೆ.
ಕೊರೊನಾ ಬಳಿಕ ದುಬೈನ ರಿಯಲ್ ಎಸ್ಟೇಟ್ ಉದ್ಯಮ ಚೇತರಿಸಿಕೊಳ್ತಿದೆ. ಸತತ ಏಳು ವರ್ಷಗಳ ಕುಸಿತದ ಬಳಿಕ ಕೊಂಚ ಸುಧಾರಿಸಿಕೊಂಡಿದೆ. ಯುಎಇನಲ್ಲಿ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ. 80ಕ್ಕಿಂತ ಹೆಚ್ಚು ವಿದೇಶಿ ನಿವಾಸಿಗಳಿದ್ದಾರೆ. ದಶಕಗಳಿಂದ ಆರ್ಥಿಕತೆಯ ಮುಖ್ಯ ಆಧಾರ ಇವರೇ. ಭಾರತೀಯರು ದುಬೈ ರಿಯಲ್ ಎಸ್ಟೇಟ್ನ ಉನ್ನತ ಖರೀದಿದಾರರಲ್ಲಿ ಸ್ಥಿರವಾದ ಸ್ಥಾನ ಪಡೆದಿದ್ದಾರೆ. ಕಳೆದ ತಿಂಗಳ ಅಂತ್ಯದ ವೇಳೆಗೆ ಎಮಿರೇಟ್ನ ಅವಿಭಾಜ್ಯ ಪ್ರಾಪರ್ಟಿ ಬೆಲೆಗಳು ಕಳೆದ ವರ್ಷದಲ್ಲಿ ಶೇ.70 ಕ್ಕಿಂತ ಹೆಚ್ಚಿವೆ.