- ದುಬೈ: ಫಾರ್ಮುಲಾ-1 ರೇಸರ್ ಲೂಯಿಸ್ ಹ್ಯಾಮಿಲ್ಟನ್ 10 ಬಾರಿ ವಿಮಾನಗಳಿಂದ ಜಿಗಿಯುವ ಮೂಲಕ ದುಬೈನಲ್ಲಿ ಉತ್ತಮ ಭಾನುವಾರವನ್ನು ಕಳೆದಿದ್ದಾರೆ.
ಲೂಯಿಸ್ ಹ್ಯಾಮಿಲ್ಟನ್ ತನ್ನ ಕಾರನ್ನು ಗಾಳಿಯಲ್ಲಿರುವಂತೆ ವೇಗವಾಗಿ ಓಡಿಸುತ್ತಾರೆ. ಇದೀಗ ಅವರು ರಿಲ್ಯಾಕ್ಸ್ ಮೂಡ್ ನಲ್ಲಿದ್ದು, ಸ್ಕೈಡೈವಿಂಗ್ ಅನ್ನು ಆನಂದಿಸಿದ್ದಾರೆ. ನೆಲದಿಂದ ಸಾವಿರಾರು ಅಡಿ ಎತ್ತರದಿಂದ ಧುಮುಕಿದ್ದಾರೆ. ಇದರ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಹ್ಯಾಂಡಲ್ ನಲ್ಲಿ ಹಂಚಿಕೊಂಡಿದ್ದಾರೆ. ದುಬೈನಲ್ಲಿ ಅವರು ಅದ್ಭುತವಾದ ಸಮಯ ಕಳೆದಿದ್ದಾರೆ.
ಹ್ಯಾಮಿಲ್ಟನ್ ಒಂದು ದಿನದಲ್ಲಿ ಸ್ಕೈಡೈವಿಂಗ್ ಮಾಡಿರುವುದು ಒಂದೆರಡು ಬಾರಿಯಲ್ಲ…… 10 ಬಾರಿ ಈ ಸಾಹಸ ಮಾಡಿರೋದು ವಿಶೇಷವಾಗಿದೆ.
ಹ್ಯಾಮಿಲ್ಟನ್ರ ಸ್ಕೈಡೈವಿಂಗ್ ಮಾಡಿರೋ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಜೋ ಪಾಂಪ್ಲಿಯಾನೊ ಅವರು ಪೋಸ್ಟ್ ಮಾಡಿದ್ದಾರೆ, ಲೂಯಿಸ್ ಹ್ಯಾಮಿಲ್ಟನ್ ಕ್ರೀಡೆಯ ಇತಿಹಾಸದಲ್ಲಿ ಅತ್ಯಂತ ನಿಪುಣ ಎಫ್ 1 ಚಾಲಕ. ಸ್ಕೈಡೈವಿಂಗ್ ನಲ್ಲೂ ಅವರು ನಿಪುಣರಾಗಿದ್ದಾರೆ ಅಂತಾ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.
ಹ್ಯಾಮಿಲ್ಟನ್ ಶೀಘ್ರದಲ್ಲೇ ಆಸ್ಟ್ರೇಲಿಯನ್ ಗ್ರ್ಯಾಂಡ್ ಪ್ರಿಕ್ಸ್ಗಾಗಿ ಮೆಲ್ಬೋರ್ನ್ಗೆ ಆಗಮಿಸಲಿದ್ದಾರೆ.