ರುಚಿ-ರುಚಿ ಆಹಾರ ಸೇವೆನೆಗೆ ಜನರು ರೆಸ್ಟೋರೆಂಟ್ ಗಳಿಗೆ ಹೋಗ್ತಾರೆ. ಆದ್ರೆ ದುಡಿದ ಹಣವನ್ನೆಲ್ಲ ರೆಸ್ಟೋರೆಂಟ್ ಗೆ ಸುರಿಯಲು ಯಾರೂ ಇಷ್ಟಪಡುವುದಿಲ್ಲ. ಆದ್ರೆ ಲಂಡನ್ ವ್ಯಕ್ತಿಯೊಬ್ಬ, ರೆಸ್ಟೋರೆಂಟ್ ಬಿಲ್ ನೋಡಿ ದಂಗಾಗಿದ್ದಾನೆ. ನೈಟ್ಸ್ ಬ್ರಿಡ್ಜ್ ನಲ್ಲಿ ಹೊಸದಾಗಿ ಶುರುವಾದ ಸಾಲ್ಟ್ ಬೇ ರೆಸ್ಟೋರೆಂಟ್ ನೀಡಿದ ಬಿಲ್ ಆತನನ್ನು ದಂಗು ಬಡಿಸಿದೆ.
ಹಸಿದ ಛಾಯಾಗ್ರಾಹಕನಿಗೆ ಆಹಾರ ನಿರಾಕರಣೆ: ವರನ ಮುಂದೆಯೇ ಮದುವೆ ಫೋಟೋಗಳು ಡಿಲೀಟ್
ಸಾಮಾಜಿಕ ಜಾಲತಾಣದಲ್ಲಿ ರೆಸ್ಟೋರೆಂಟ್ ಬಿಲ್ ವೈರಲ್ ಆಗಿದೆ. ಸೇವಾ ಶುಲ್ಕ ಸೇರಿ, 1 ಲಕ್ಷದ 80 ಸಾವಿರ ರೂಪಾಯಿ ಬಿಲ್ ಆಗಿದೆ. ಬಿಲ್‌ನಲ್ಲಿರುವ ಅತ್ಯಂತ ದುಬಾರಿ ಆಹಾರವೆಂದರೆ ಜೈಂಟ್ ಟಾಮ್‌ಹಾಕ್. ಇದರ ಬೆಲೆ 62,800 ರೂಪಾಯಿ. ನಾಲ್ಕು ರೆಡ್ ಬುಲ್‌ಗಳ ಬೆಲೆ 4400 ರೂಪಾಯಿ. ಎಂಟು ಗ್ರಾಹಕರಿಗೆ ರೆಸ್ಟೋರೆಂಟ್ ಮಾಡಿದ ಸರ್ವೀಸ್ ಚಾರ್ಜ್ ಬರೋಬ್ಬರಿ 23,400 ರೂಪಾಯಿ. ಒಂದು ಲೋಟ ಕೋಕಾ-ಕೋಲಾದ ಬೆಲೆ 900 ರೂಪಾಯಿ.
ರೆಸ್ಟೋರೆಂಟ್ ನೋಡಿಯೇ, ಇದ್ರ ಬೆಲೆ ದುಬಾರಿ ಎಂದು ಅನೇಕರು ಭಾವಿಸಿದ್ದರು. ಟ್ವಿಟರ್ ಬಳಕೆದಾರ ಜಮಿಲ್ ಅಮೀನ್ ಎಂಬುವವರು, ರೆಸ್ಟೋರೆಂಟ್ ಬಿಲ್ ಟ್ವೀಟ್ ಮಾಡಿದ್ದಾರೆ. ಈ ಪೋಸ್ಟ್ ವೇಗವಾಗಿ ವೈರಲ್ ಆಗಿದೆ. 10 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ತನ್ನ ಇಡೀ ಬ್ಯಾಂಕ್ ಬ್ಯಾಲೆನ್ಸ್ ಒಂದೇ ರಾತ್ರಿ ಖರ್ಚಾಯ್ತು ಎಂದು ಟ್ವೀಟ್ ಮಾಡಿದ್ದಾನೆ.