ಕಿವಿ ಹಣ್ಣು ಬಲು ದುಬಾರಿಯಾದರೂ ಹಲವಾರು ಪೋಷಕಾಂಶಗಳನ್ನು ತನ್ನೊಳಗೆ ಸೇರಿಸಿಕೊಂಡಿದೆ.
ಇದರ ಸೇವನೆಯಿಂದ ಜೀರ್ಣಶಕ್ತಿ ಹೆಚ್ಚಾಗುತ್ತದೆ. ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಪೊಟ್ಯಾಷಿಯಂ ಸೋಡಿಯಮ್ ಹೇರಳವಾಗಿ ಸಿಗುತ್ತದೆ.
ಕ್ಯಾನ್ಸರ್ ಬರದಂತೆ ಇದು ನಮ್ಮನ್ನು ಕಾಪಾಡುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ದೇಹದ ತೂಕವನ್ನು ಇಳಿಸುತ್ತದೆ.
ಇದರಲ್ಲಿ ಇರುವ ಫೈಬರ್ ಅಂಶ ಮಲಬದ್ಧತೆ ಮತ್ತು ಕರುಳಿನ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಹೃದಯದ ರಕ್ತ ಸಂಚಾರವನ್ನು ಬೂಸ್ಟ್ ಮಾಡುತ್ತದೆ.
ಸಕ್ಕರೆ ಕಾಯಿಲೆ ಇರುವವರಿಗೆ ಇದು ಹೇಳಿಮಾಡಿಸಿದ ಹಣ್ಣು. ಕಣ್ಣಿನ ದೃಷ್ಟಿಯೂ ಚುರುಕಾಗುತ್ತದೆ. ದೇಹಕ್ಕೆ ಬೇಕಾದ ಖನಿಜಾಂಶಗಳು ಹೇರಳವಾಗಿ ಸಿಗುತ್ತವೆ.ವಿಟಮಿನ್ ಎ, ಚರ್ಮ ರೋಗಗಳಿಂದ ನಮ್ಮನ್ನು ಕಾಪಾಡುತ್ತದೆ.