ದೀಪಾವಳಿ ಹಬ್ಬದಂದು ಮನೆಯಲ್ಲಿ ಏಳಿಗೆಯಾಗಬೇಕೆಂದು ಧನಲಕ್ಷ್ಮೀಯ ಪೂಜೆ ಮಾಡುತ್ತಾರೆ. ಇದರಿಂದ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ ಎಂಬುದು ನಂಬಿಕೆ. ಹಾಗಾಗಿ ನಿಮ್ಮ ಮನೆಯಲ್ಲಿ ಲಕ್ಷ್ಮೀ ಶಾಶ್ವತವಾಗಿ ನೆಲೆ ನಿಲ್ಲಲು ದೀಪಾವಳಿ ಹಬ್ಬದಂದು ಮೊಸರಿನಿಂದ ಹೀಗೆ ಮಾಡಿ.
ಲಕ್ಷ್ಮೀದೇವಿಗೆ ಮೊಸರು ಬಹಳ ಪ್ರಿಯ. ಆದ್ದರಿಂದ ನೀವು ಲಕ್ಷ್ಮೀ ಪೂಜೆ ಮಾಡುವ ಮೊದಲು ಸ್ನಾನ ಮಾಡುವ ನೀರಿಗೆ ಸ್ವಲ್ಪ ಮೊಸರನ್ನು ಹಾಕಿ ಸ್ನಾನ ಮಾಡಿ. ಒಂದು ವೇಳೆ ಮೊಸರು ಸಿಗದಿದ್ದರೆ ನೀರಿಗೆ ಸಮುದ್ರದ ಉಪ್ಪನ್ನು ಮಿಕ್ಸ್ ಮಾಡಿ ಸ್ನಾನ ಮಾಡಿ. ಇದರಿಂದ ಆರ್ಥಿಕ ಸಮಸ್ಯೆ ಕಳೆದು ಹೋಗುತ್ತದೆ.
ಬಳಿಕ ಲಕ್ಷ್ಮೀ ದೇವಿಯ ಪೂಜೆ ಮಾಡುವಾಗ ಲಕ್ಷ್ಮೀದೇವಿಯ ಅಷ್ಟೋತ್ತರವನ್ನು ಪಠಿಸಬೇಕು. ಹಾಗೇ ದೇವಿಗೆ ಮೊಸರನ್ನು ನೈವೇದ್ಯವಾಗಿ ಇಡಬೇಕು. ಇದರಿಂದ ಲಕ್ಷ್ಮೀದೇವಿಯ ಅನುಗ್ರಹ ನಿಮಗೆ ಸಿಗುತ್ತದೆ. ನಿಮ್ಮ ಮನೆಯಲ್ಲಿ ಏಳಿಗೆಯಾಗುತ್ತದೆ.