ಈ ಬಾರಿ ದೀಪಾವಳಿಗೆ ಬೆಲ್ಲದ ಖೀರ್ ಮಾಡಿ. ರುಚಿ ರುಚಿ ಖೀರ್ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ.
ಬೆಲ್ಲದ ಖೀರ್ ಮಾಡಲು ಬೇಕಾಗುವ ಪದಾರ್ಥ:
ಅಕ್ಕಿ 100 ಗ್ರಾಂ
ಅವಶ್ಯಕತೆಗೆ ತಕ್ಕಷ್ಟು ನೀರು
ತುಪ್ಪ – 2 ಚಮಚ
ಗೋಡಂಬಿ -10 ರಿಂದ 12
ಒಣದ್ರಾಕ್ಷಿ -2 ಚಮಚ
ಹಾಲು – ಒಂದು ಲೀಟರ್
ಏಲಕ್ಕಿ ಪುಡಿ -1/2 ಚಮಚ
ಬೆಲ್ಲ -1/2 ಕಪ್
ಬಾದಾಮಿ –ಅಲಂಕಾರಕ್ಕೆ
ಬೆಲ್ಲದ ಖೀರ್ ಮಾಡುವ ವಿಧಾನ :
ಅಕ್ಕಿಯನ್ನು ನೀರಿನಲ್ಲಿ ಸ್ವಚ್ಛವಾಗಿ ತೊಳೆದು 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ.
ಒಂದು ಪ್ಯಾನ್ ಗೆ ತುಪ್ಪ ಹಾಕಿ ಬಿಸಿ ಮಾಡಿ. ಅದಕ್ಕೆ ಗೋಡಂಬಿ ಹಾಗೂ ಒಣ ದ್ರಾಕ್ಷಿಯನ್ನು ಹಾಕಿ ಗೋಲ್ಡನ್ ಬಣ್ಣ ಬಂದ ನಂತ್ರ ಗ್ಯಾಸ್ ಆರಿಸಿ. ಇನ್ನೊಂದು ಪಾತ್ರೆಗೆ ಹಾಲನ್ನು ಹಾಕಿ ಅದಕ್ಕೆ ನೆನೆಸಿಟ್ಟ ಅಕ್ಕಿಯನ್ನು ಹಾಕಿ ಸರಿಯಾಗಿ ಮಿಕ್ಸ್ ಮಾಡಿ. ಅಕ್ಕಿ ಚೆನ್ನಾಗಿ ಬೇಯುವವರೆಗೂ ಕುದಿಯಲು ಬಿಡಿ. ನಂತ್ರ ಏಲಕ್ಕಿ ಪುಡಿ ಹಾಗೂ ತುಪ್ಪದಲ್ಲಿ ಹುರಿದ ಗೋಡಂಬಿ, ಒಣ ದ್ರಾಕ್ಷಿಯನ್ನು ಹಾಕಿ ಗ್ಯಾಸ್ ಆರಿಸಿ.
ಇನ್ನೊಂದು ಪ್ಯಾನ್ ಗೆ ಬೆಲ್ಲ ಹಾಗೂ ಸ್ವಲ್ಪ ನೀರನ್ನು ಹಾಕಿ ಬಿಸಿ ಮಾಡಿ. ಬೆಲ್ಲ ಕರಗಿದ ನಂತ್ರ ಅದನ್ನು ಸೋಸಿ. ಬೆಲ್ಲವನ್ನು ಅನ್ನದ ಖೀರ್ ಗೆ ಹಾಕಿ ಸರಿಯಾಗಿ ಮಿಕ್ಸ್ ಮಾಡಿ ಸರ್ವಿಂಗ್ ಪಾತ್ರೆಗೆ ಇದನ್ನು ಹಾಕಿ. ಮೇಲೆ ಬಾದಾಮಿಯಿಟ್ಟು ಅಲಂಕರಿಸಿ.