ದೀಪಗಳ ಹಬ್ಬ ದೀಪಾವಳಿಯ ಸಂಭ್ರಮ ಮನೆ ಮಾಡಿದೆ. ಭಾನುವಾರ ಲಕ್ಷ್ಮಿ ಪೂಜೆ ನಾಡಿನೆಲ್ಲೆಡೆ ನಡೆಯಲಿದೆ. ಇದಕ್ಕಾಗಿ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ತಾಯಿ ಲಕ್ಷ್ಮಿ ಜೊತೆ ಗಣೇಶನ ಆರಾಧನೆಯನ್ನು ಮಾಡಲಾಗುತ್ತದೆ. ಮನೆ ಮನೆಗಳಲ್ಲಿ ಹಾಗೂ ಅಂಗಡಿ, ವ್ಯಾಪಾರ ಸ್ಥಳಗಳಲ್ಲಿ ಲಕ್ಷ್ಮಿ ಆರಾಧನೆ ಮಾಡಿ, ಯಶಸ್ಸಿಗೆ ಪ್ರಾರ್ಥಿಸುತ್ತಾರೆ.
ದೀಪಾವಳಿಯ ಐದು ದಿನಗಳ ಕಾಲ ಮನೆಯಲ್ಲಿ ದೀಪ ಬೆಳಗಿ ಪೂಜೆ ಮಾಡುವವರಿದ್ದಾರೆ. ಬೆಳಿಗ್ಗೆ ಹಾಗೂ ರಾತ್ರಿ ಎರಡೂ ಸಮಯದಲ್ಲಿ ದೇವರ ಮುಂದೆ ಹಾಗೂ ಮನೆಯ ಮುಖ್ಯ ಬಾಗಿಲಿಗೆ ದೀಪ ಬೆಳಗಬೇಕು. ಆರ್ಥಿಕ ಸಮಸ್ಯೆ ನಿವಾರಣೆಗೆ ಲಕ್ಷ್ಮಿ ಪೂಜೆ ಮಾಡಬೇಕು. ಲಕ್ಷ್ಮಿ ಪೂಜೆಯಲ್ಲಿ ಯಾವುದೇ ಲೋಪವಾಗಬಾರದು ಎಂದು ಎಲ್ಲರೂ ಬಯಸ್ತಾರೆ. ಆದ್ರೆ ಲಕ್ಷ್ಮಿ ಪೂಜೆ ದಿನ ರಾತ್ರಿ ಮಾಡುವ ಒಂದು ಕೆಲಸ ನಮ್ಮ ಅದೃಷ್ಟ ಬದಲಿಸಬಲ್ಲದು ಎಂಬುದು ಅನೇಕರಿಗೆ ತಿಳಿದಿಲ್ಲ.
ದೀಪಾವಳಿಯಂದು ಲಕ್ಷ್ಮಿ ಪೂಜೆ ನಂತ್ರ ಮನೆಯ ಎಲ್ಲ ಕೋಣೆಗಳಲ್ಲಿ ಶಂಖ ಮತ್ತು ಗಂಟೆಯನ್ನು ಬಾರಿಸಬೇಕು. ಶಂಖ ಹಾಗೂ ಗಂಟೆ ಶಬ್ಧಕ್ಕೆ ನಕಾರಾತ್ಮಕ ಶಕ್ತಿಯ ನಷ್ಟವಾಗುತ್ತದೆ. ಇದು ವ್ಯಕ್ತಿ ಕ್ರಮೇಣ ಶ್ರೀಮಂತನಾಗಲು ನೆರವಾಗುತ್ತದೆ.