ದೀಪಾವಳಿಯಂದು ಮಹಾಲಕ್ಷ್ಮಿ ಸ್ವಾಗತಕ್ಕಾಗಿ ಭಕ್ತರು ತಯಾರಿ ನಡೆಸುತ್ತಿದ್ದಾರೆ. ಮಹಾಲಕ್ಷ್ಮಿ ಸ್ವಚ್ಛತೆಯನ್ನು ಬಯಸ್ತಾಳೆ. ಹಾಗಾಗಿ ದೀಪಾವಳಿ ರಾತ್ರಿಗೂ ಮೊದಲು ಮನೆಯಲ್ಲಿರುವ ಕಸವನ್ನೆಲ್ಲ ಹೊರಗೆ ಹಾಕಿ. ಈ ಮೂಲಕ ಮಹಾಲಕ್ಷ್ಮಿ ಪ್ರವೇಶಕ್ಕೆ ದಾರಿ ಮಾಡಿಕೊಡಿ.
ವಾಸ್ತುಶಾಸ್ತ್ರದ ಪ್ರಕಾರ ಈಶಾನ್ಯ ದಿಕ್ಕಿನಲ್ಲಿ ಪೂಜೆ ಮಾಡುವುದು ಒಳ್ಳೆಯದು. ಪೂರ್ವ-ಮಧ್ಯ ಅಥವಾ ಉತ್ತರ-ಮಧ್ಯದ ಯಾವುದೇ ಕೋಣೆಯಲ್ಲಾದ್ರೂ ಲಕ್ಷ್ಮಿ ಪೂಜೆ ಮಾಡಿ. ಮನೆಯ ಮಧ್ಯ ಭಾಗದಲ್ಲಿ ಬ್ರಹ್ಮ ನೆಲೆಸಿರುತ್ತಾನೆ. ಹಾಗಾಗಿ ಅಲ್ಲಿ ಕೂಡ ಪೂಜೆ ಮಾಡಬಹುದು. ಪೂರ್ವ ಅಥವಾ ಪಶ್ಚಿಮಕ್ಕೆ ಮುಖ ಮಾಡಿ ಲಕ್ಷ್ಮಿ ಪೂಜೆ ಮಾಡಿ.
ದೀಪಾವಳಿ ಪೂಜೆ ನಂತ್ರ ಮೊದಲು ದೇವಸ್ಥಾನಕ್ಕೆ ದೀಪ ದಾನ ಮಾಡಿ. ನಂತ್ರ ಮನೆಯಲ್ಲಿ ದೀಪ ಬೆಳಗಿ. ದೀಪಾವಳಿ ರಾತ್ರಿ ಲಕ್ಷ್ಮಿ ಮುಂದೆ ತುಪ್ಪದ ದೀಪ ಹಚ್ಚಿ.
ದೀಪಾವಳಿಯ ರಾತ್ರಿ ಮನೆಯ ಮುಖ್ಯ ದ್ವಾರದ ಮುಂದೆ ಕೆಂಪು ಬಣ್ಣದ ರಂಗೋಲಿ ಹಾಕಿ ಎರಡೂ ಕಡೆ ದೊಡ್ಡ ದೀಪವನ್ನು ಹಚ್ಚಿ. ದೀಪ ರಾತ್ರಿ ಪೂರ್ತಿ ಉರಿಯುವಂತಿರಲಿ. ರಾತ್ರಿ ಲಕ್ಷ್ಮಿ ಭೂಮಿಗೆ ಬರ್ತಾಳಂತೆ. ಸಾತ್ವಿಕ ವಾತಾವರಣವಿರುವ ಮನೆಯಲ್ಲಿ ಆಕೆ ಶಾಶ್ವತವಾಗಿ ನೆಲೆಸಿರ್ತಾಳಂತೆ.
ದೀಪಾವಳಿ ದಿನ ಅಶ್ವತ್ಥ ಮರದ ಕೆಳಗೆ ದೀಪವನ್ನು ಹಚ್ಚಿ ಮನೆಗೆ ವಾಪಸ್ ಬನ್ನಿ. ಯಾವುದೇ ಕಾರಣಕ್ಕೂ ಹಿಂದಿರುಗಿ ನೋಡಬೇಡಿ. ಹೀಗೆ ಮಾಡಿದ್ರೆ ವರ್ಷಪೂರ್ತಿ ಹಣದ ಕೊರತೆ ನಿಮ್ಮನ್ನು ಕಾಡುವುದಿಲ್ಲ.