ನವರಾತ್ರಿ ನಂತ್ರ ದೀಪಾವಳಿಗಾಗಿ ಸಿದ್ಧತೆ ಜೋರಾಗಿ ನಡೆದಿದೆ. ದೀಪಾವಳಿಯಲ್ಲಿ ಮನೆಯ ಅಂದಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ದೀಪಾವಳಿಯಲ್ಲಿ ಮನೆಯನ್ನು ಸುಂದರಗೊಳಿಸುವ ಸರಳ ಟಿಪ್ಸ್ ಇಲ್ಲಿದೆ.
ಪ್ರೀತಿ ನಿರಾಕರಿಸಿದ ಯುವತಿ; ಉಸಿರುಗಟ್ಟಿಸಿ ಕೊಂದ ಯುವಕ; ನಂತರ ಮಾಡಿದ್ದೇನು ಗೊತ್ತಾ…?
ಮೊದಲು ಏನು ಮಾಡಬೇಕೆಂಬುದರ ಪಟ್ಟಿ ಮಾಡಿಕೊಳ್ಳಬೇಕು. ಆಗ ಯಾವುದೇ ಕೆಲಸ ಮಿಸ್ ಆಗುವುದಿಲ್ಲ. ಯಾವ ಕೋಣೆಗೆ ಹೇಗೆ ಅಲಂಕಾರ ಮಾಡಬೇಕು ಎಂಬುದನ್ನು ಪಟ್ಟಿ ಮಾಡಿ.
ಅಲಂಕಾರ, ಸಿಹಿ, ಪಟಾಕಿ, ಬಟ್ಟೆ ಹೀಗೆ ಹಬ್ಬಕ್ಕೆ ಸಾಕಷ್ಟು ಹಣ ಖರ್ಚಾಗುತ್ತದೆ. ಕೈ ಚೆಲ್ಲಿ ಹಣ ಖಾಲಿ ಮಾಡಿ ನಂತ್ರ ಪರಿತಪಿಸುವುದು ಬೇಡ. ಹಾಗಾಗಿ ಹಬ್ಬದ ತಯಾರಿಗೆ ಮೊದಲೇ ನಿಮ್ಮ ಬಜೆಟ್ ತೀರ್ಮಾನಿಸಿಕೊಳ್ಳಿ.
ಮನೆಯ ಚಂದ ಹೆಚ್ಚಿಸಲು ದುಬಾರಿ ಬೆಲೆ ಕೊಟ್ಟು ಅಲಂಕಾರಿಕ ವಸ್ತುಗಳನ್ನು ತರುವ ಬದಲು ಮನೆಯಲ್ಲೇ ಇರುವ ಹಳೆಯ ವಸ್ತುಗಳನ್ನ ಬಳಸಿ ಮನೆಯನ್ನು ಅಲಂಕರಿಸಬಹುದು.
ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್: ನ್ಯಾಯಬೆಲೆ ಅಂಗಡಿಯಲ್ಲೂ ಸಿಗುತ್ತೆ ಸಣ್ಣ LPG ಸಿಲಿಂಡರ್
ಹಳೆಯ ಬನಾರಾಸಿ ಸೀರೆಗಳನ್ನು ಪರದೆಯ ರೂಪದಲ್ಲಿ ಬಳಸಬಹುದು. ದೀಪಕ್ಕೆ ಸುಂದರ ಬಣ್ಣ ನೀಡಿ, ಹೂವಿನಿಂದ ಅಲಂಕರಿಸಬಹುದು. ಹಳೆ ಪ್ಲಾಸ್ಟಿಕ್ ಬಾಟಲಿಗಳಿಂದ ಅಲಂಕಾರಿಕ ವಸ್ತುಗಳನ್ನು ತಯಾರಿಸಬಹುದು. 15 ದಿನಗಳ ಮೊದಲೇ ಹಬ್ಬದ ತಯಾರಿ ಶುರು ಮಾಡಿದ್ರೆ ಯಾವುದೂ ಮರೆತು ಹೋಗುವುದಿಲ್ಲ.