ದೀಪಾವಳಿ ಹಬ್ಬದಲ್ಲಿ ಕಂಪನಿಗಳು ಉದ್ಯೋಗಿಗಳಿಗೆ ಬೋನಸ್ ನೀಡುವುದು ವಾಡಿಕೆ. ಇದೇ ತಿಂಗಳ ಸಂಬಳದಲ್ಲಿ ಅಥವಾ ಮುಂದಿನ ತಿಂಗಳ ಸಂಬಳದ ಜೊತೆಗೆ ಬೋನಸ್ ನೀಡಲಾಗುತ್ತದೆ. ಈ ಬೋನಸ್ ಹಣವನ್ನು ಸುಖಾಸುಮ್ಮನೇ ವೇಸ್ಟ್ ಮಾಡದೇ ಸದ್ಭಳಕೆ ಮಾಡಿಕೊಳ್ಳಬೇಕು. ಇದಕ್ಕೆ ಹಣಕಾಸು ತಜ್ಞರು ಕೆಲವು ಟಿಪ್ಸ್ ಕೊಟ್ಟಿದ್ದಾರೆ.
ನೀವೇನಾದ್ರೂ ಸಾಲ ಮಾಡಿದ್ರೆ ಅದನ್ನು ತೀರಿಸಲು ದೀಪಾವಳಿ ಬೋನಸ್ ಹಣವನ್ನು ಬಳಸಿಕೊಳ್ಳಿ. ಅಥವಾ ಆಪತ್ಕಾಲಕ್ಕೆ ಇರಲಿ ಅಂತಾ ಈ ಹಣವನ್ನು ಸೇವ್ ಮಾಡಿ ಇಡಬಹುದು. ವರ್ಷಾಂತ್ಯದಲ್ಲಿ ತೆರಿಗೆ ಕಟ್ಟಲು ಹಣವಿಲ್ಲದೇ ಇದ್ದಲ್ಲಿ ಇದನ್ನೇ ಬಳಸಿಕೊಳ್ಳಬಹುದು. ಶಾಪಿಂಗ್ ಕೂಡ ಮಾಡಬಹುದು, ಆದ್ರೆ ಮಿತಿ ಮೀರಬೇಡಿ.
ಯಾಕಂದ್ರೆ ಡಿಸ್ಕೌಂಟ್ ಇದೆ ಅನ್ನೋ ಭರದಲ್ಲಿ ಬೇಡದ್ದನ್ನೆಲ್ಲಾ ಕೊಂಡುಕೊಳ್ಳುವವರೇ ಹೆಚ್ಚು. ಹಾಗೆ ಮಾಡದೇ ತೀರಾ ಅಗತ್ಯವೆನಿಸಿದ ವಸ್ತುಗಳನ್ನು ಮಾತ್ರ ಖರೀದಿಸಿ. ಮನೆಗೆ ಬೇಕಾದ ಫ್ರಿಡ್ಜ್, ಟಿವಿ, ವಾಷಿಂಗ್ ಮಷಿನ್ ಕೊಳ್ಳಲು ಸಹ ಬೋನಸ್ ಹಣವನ್ನು ಬಳಸಿಕೊಳ್ಳಬಹುದು.