ತಾಯಿ ಲಕ್ಷ್ಮಿಯನ್ನು ಆರಾಧಿಸುವ ಹಾಗೂ ಆಕೆಯ ಕೃಪೆಗೆ ಪಾತ್ರವಾಗುವ ದಿನ ದೀಪಾವಳಿ. ಈ ದಿನ ಲಕ್ಷ್ಮಿ ಮುನಿಸಿಕೊಳ್ಳುವಂತಹ ಯಾವುದೆ ಕೆಲಸವನ್ನು ಮಾಡಬಾರದು. ಹಾಗಾಗಿ ಶಾಸ್ತ್ರದಲ್ಲಿ ಸೂಚಿಸಿದಂತೆ ದೀಪಾವಳಿಯ ದಿನ ಲಕ್ಷ್ಮಿಗೆ ಕೋಪ ತರಿಸುವಂತಹ ಯಾವ ಕೆಲಸವನ್ನೂ ಮಾಡಬೇಡಿ. ಇದರಿಂದ ಮನೆಯಲ್ಲಿ ಕಳ್ಳತನ ಹಾಗೂ ಆರ್ಥಿಕ ಹಾನಿಯುಂಟಾಗುವ ಸಾಧ್ಯತೆ ಇರುತ್ತದೆ.
ದೀಪಾವಳಿಯ ರಾತ್ರಿ ಪೊರಕೆಯನ್ನು ಛಾವಣಿಗೆ ತೂಗು ಹಾಕಬೇಡಿ. ಹಾಗೆ ಛಾವಣಿಯನ್ನು ಪೊರಕೆಯಿಂದ ಗುಡಿಸಬೇಡಿ. ಇದರಿಂದ ಕಳ್ಳತನವಾಗುವ ಸಾಧ್ಯತೆ ಇರುತ್ತದೆ.
ಮನೆಯ ಲಕ್ಷ್ಮಿ ರೂಪದಂತಿರುವ ಪತ್ನಿಗೆ ಕೆಟ್ಟ ಶಬ್ದಗಳಿಂದ ಬೈದು ಆಕೆಯ ಮನಸ್ಸಿಗೆ ನೋವುಂಟು ಮಾಡಬೇಡಿ. ಮಗಳು ಹಾಗೂ ಸಹೋದರಿಯರನ್ನು ನಿಂದಿಸಬೇಡಿ. ಇದರಿಂದ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ.
ದೀಪಾವಳಿಯಂದು ಭಿಕ್ಷೆ ಬೇಡಿ ಬಂದವರನ್ನು ಬರಿಗೈನಲ್ಲಿ ಕಳುಹಿಸಬೇಡಿ. ನಿಮ್ಮ ಕೈನಲ್ಲಾದದ್ದನ್ನು ನೀಡಿ.
ದೀಪಾವಳಿಯ ಸಂಜೆ, ಲಕ್ಷ್ಮಿ ಪೂಜೆಗೂ ಮೊದಲು ಪರ ವ್ಯಕ್ತಿಗೆ ಏನನ್ನೂ ನೀಡಬೇಡಿ. ಇದರಿಂದ ಆರ್ಥಿಕ ನಷ್ಟವುಂಟಾಗುತ್ತದೆ.
ದೀಪಾವಳಿಯಂದು ಸೂರ್ಯಾಸ್ತದ ನಂತ್ರ ಪೊರಕೆಯನ್ನು ತೆಗೆಯಬೇಡಿ. ಇದರಿಂದ ಲಕ್ಷ್ಮಿ ಕೋಪಗೊಳ್ತಾಳೆ.
ದೀಪಾವಳಿಯ ದಿನ ಮನೆಯಿಂದ ಹೊರ ಹೋದವರು ವಾಪಸ್ ಬರುವಾಗ ಏನನ್ನಾದ್ರೂ ಅವಶ್ಯವಾಗಿ ತನ್ನಿ. ಕಲ್ಲಾದ್ರೂ ಚಿಂತೆ ಇಲ್ಲ.
ಮನೆಯಲ್ಲಿರುವ ಜಲ ಮೂಲ ಅಂದ್ರೆ ನೀರಿನ ಟ್ಯಾಂಕ್, ಬಾವಿ ಬಳಿ ದೀಪವನ್ನು ಬೆಳಗಿಸಿ.