ಚಾಮರಾಜನಗರದ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆಮಹದೇಶ್ವರ ಬೆಟ್ಟದಲ್ಲಿ ಅಕ್ಟೋಬರ್ 22 ರಿಂದ ಅಕ್ಟೋಬರ್ 26 ರವರೆಗೆ ದೀಪಾವಳಿ ಜಾತ್ರೆ, ರಥೋತ್ಸವ ನಡೆದಿದ್ದು, ಈ ಸಂದರ್ಭದಲ್ಲಿ ಪ್ರಸಾದ ಖರೀದಿ, ಚಿನ್ನದ ತೇರು ಎಳೆಸುವುದು ಹಾಗೂ ಇತರೆ ಸೇವಾ ಕಾರ್ಯಗಳ ಮೂಲಕ ಕೋಟ್ಯಾಂತರ ರೂಪಾಯಿ ಆದಾಯ ಹರಿದುಬಂದಿದೆ.
ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಮಲೆಮಹದೇಶ್ವರ ಜಾತ್ರೆಗೆ ಆಗಮಿಸಿದ್ದು, 2 ಲಕ್ಷಕ್ಕೂ ಅಧಿಕ ಲಾಡುಗಳು ಮಾರಾಟವಾಗಿವೆ. ಅಲ್ಲದೆ ಹರಕೆ ಹೊತ್ತ ಒಂದೂವರೆ ಸಾವಿರಕ್ಕೂ ಅಧಿಕ ಭಕ್ತರು ಮಾದೇಶ್ವರನ ಚಿನ್ನದ ತೇರು ಎಳೆಸಿದ್ದಾರೆ.
ರಾಜ್ಯದ ಪ್ರಸಿದ್ಧ ದೇಗುಲಗಳಲ್ಲಿ ಒಂದಾಗಿರುವ ಮಲೆ ಮಹದೇಶ್ವರನ ಸನ್ನಿಧಿಗೆ ದರ್ಶನಕ್ಕೆ ಬರುವವರು ಪ್ರಸಾದ ರೂಪದಲ್ಲಿ ಲಾಡು ಖರೀದಿಸುತ್ತಾರಲ್ಲದೆ, ಚಿನ್ನದ ತೇರು ಎಳೆಸುವ ಹರಕೆಯನ್ನೂ ಹೊರುತ್ತಾರೆ. ಜೊತೆಗೆ ಇತರೆ ಸೇವಾ ಕಾರ್ಯಗಳನ್ನು ಮಾಡಿಸಿದ್ದು, ಇವುಗಳಿಂದ ಒಂದು ಕೋಟಿ ರೂಪಾಯಿಗಳಿಗೂ ಅಧಿಕ ಆದಾಯ ಬಂದಿದೆ.