ದೀಪಗಳ ಹಬ್ಬ ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಈ ಬಾರಿ ನವೆಂಬರ್ 4 ರಂದು ಲಕ್ಷ್ಮಿ ಪೂಜೆ ಬಂದಿದೆ. ಮನೆಯಲ್ಲಿ ಸುಖ-ಶಾಂತಿ, ಧನ-ಸಂಪತ್ತು ಪ್ರಾಪ್ತಿಗಾಗಿ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಶಾಸ್ತ್ರಗಳ ಪ್ರಕಾರ ದೇವಿ ಲಕ್ಷ್ಮಿ ಪೂಜೆ ಮಾಡುವ ಮೊದಲು ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ.
ತಾಯಿ ಲಕ್ಷ್ಮಿ ಪೂಜೆ ವೇಳೆ ದೇವಿಗೆ ತುಳಸಿಯ ಎಲೆಗಳನ್ನು ಬಳಸಬೇಡಿ. ತುಳಸಿ ಭಗವಂತ ವಿಷ್ಣುವಿಗೆ ಪ್ರಿಯ. ವಿಷ್ಣುವಿನ ಇನ್ನೊಂದು ಅವತಾರ ಸಾಲಿಗ್ರಾಮದ ಪತ್ನಿ ತುಳಸಿ. ಆದ್ರೆ ತುಳಸಿ, ವಿಷ್ಣುವಿನ ಪತ್ನಿ ಲಕ್ಷ್ಮಿಗೆ ವಿರೋಧಿ. ಹಾಗಾಗಿ ಲಕ್ಷ್ಮಿ ಪೂಜೆಗೆ ತುಳಸಿ ಪ್ರಯೋಗ ಬೇಡ.
ತಾಯಿ ಲಕ್ಷ್ಮಿಗೆ ಹಚ್ಚುವ ದೀಪದ ಬಣ್ಣ ಕೆಂಪಗಿರಲಿ. ದೇವಿ ಮೂರ್ತಿಯ ಬಲಭಾಗದಲ್ಲಿ ದೀಪವನ್ನಿಡಿ.
ತಾಯಿ ಲಕ್ಷ್ಮಿ ಪೂಜೆ ವೇಳೆ ಬಿಳಿ ಹೂವನ್ನು ಅರ್ಪಿಸಬೇಡಿ. ಲಕ್ಷ್ಮಿ ಸುಮಂಗಲೆ. ಹಾಗಾಗಿ ಸದಾ ಕೆಂಪು ಹೂವನ್ನು ಲಕ್ಷ್ಮಿಗೆ ಅರ್ಪಣೆ ಮಾಡಿ. ಕೆಂಪು ಗುಲಾಬಿ, ಕೆಂಪು ಕಮಲ ಹೀಗೆ ಕೆಂಪು ಹೂವನ್ನು ತಾಯಿಗೆ ನೀಡಿ.
ಭಗವಂತ ವಿಷ್ಣುವಿನ ಪೂಜೆ ನಡೆಯದೆ ಹೋದಲ್ಲಿ ತಾಯಿ ಲಕ್ಷ್ಮಿ ಪೂಜೆಯ ಶುಭ ಫಲ ಪ್ರಾಪ್ತಿಯಾಗುವುದಿಲ್ಲ. ಹಾಗಾಗಿ ಮೊದಲು ಗಣೇಶನ ಪೂಜೆ ಮಾಡಿ ನಂತ್ರ ಲಕ್ಷ್ಮಿ-ವಿಷ್ಣುವಿನ ಪೂಜೆ ಮಾಡಬೇಕು. ಪ್ರಸಾದವನ್ನು ದಕ್ಷಿಣ ದಿಕ್ಕಿನಲ್ಲಿಡಬೇಕು. ಹೂ ಹಾಗೂ ಮಾಲೆ ತಾಯಿಯ ಮುಂದಿರಲಿ.