ದೇಶದೆಲ್ಲೆಡೆ ದೀಪಾವಳಿಯನ್ನು ಆಚರಿಸಿದರೂ, ಆಯಾ ಪ್ರದೇಶಕ್ಕೆ ಅನುಗುಣವಾಗಿ ಹಬ್ಬದ ಆಚರಣೆಗಳಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದೆ.
ದೀಪಾವಳಿಯನ್ನು ಕೆಲವು ಪ್ರದೇಶಗಳಲ್ಲಿ ‘ಹಟ್ಟಿ ಹಬ್ಬ’ ಎಂದೂ ಕರೆಯಲಾಗುತ್ತದೆ. ಮನೆಯ ಮುಂದೆ ‘ಹಟ್ಟಿ ಲಕ್ಕವ್ವ’ನನ್ನು ಕೂರಿಸುವ ಸಂಪ್ರದಾಯ ಹೆಚ್ಚಿನ ಕಡೆಗಳಲ್ಲಿ ರೂಢಿಯಲ್ಲಿದೆ.
ಕಾಲ ಬದಲಾದಂತೆ ಹಬ್ಬದ ಆಚರಣೆಗಳಲ್ಲಿ ಬದಲಾವಣೆ ಆಗಿದ್ದರೂ, ಗ್ರಾಮೀಣ ಪ್ರದೇಶದಲ್ಲಿ ಅಷ್ಟೇ ಏಕೆ ನಗರಗಳಲ್ಲಿಯೂ ಹಟ್ಟಿ ಲಕ್ಕವ್ವನನ್ನು ಕೂರಿಸಲಾಗುತ್ತದೆ. ಇದಕ್ಕೆ ಕೆರಕನ್ನು ಇಡುವುದು ಎಂದೂ ಕರೆಯುತ್ತಾರೆ. ಕಾಶಿ ಹುಲ್ಲು, ಉತ್ರಾಣಿ ಕಡ್ಡಿ, ಗರಿಕೆ, ಭತ್ತದ ತೆನೆ, ರಾಗಿ, ಜೋಳದ ತೆನೆ, ವಿವಿಧ ನಮೂನೆಯ ಹೂವುಗಳು, ಸಸ್ಯಗಳನ್ನು ಸೆಗಣಿಯೊಂದಿಗೆ ಇಟ್ಟು ಪುಟ್ಟಿಯಲ್ಲಿ ಮುಚ್ಚಿಡಲಾಗುತ್ತದೆ. ಜೊತೆಗೆ ದೀಪವನ್ನು ಹಚ್ಚಿಡಲಾಗುತ್ತದೆ.
ಕೊಹ್ಲಿ ಪುತ್ರಿಗೆ ಅತ್ಯಾಚಾರ ಬೆದರಿಕೆ ವಿರುದ್ಧ ಸಮರಕ್ಕೆ ಸಜ್ಜಾದ ಮಹಿಳಾ ಆಯೋಗ..!
ಹೀಗೆ ಮನೆಯ ಬಾಗಿಲ ಬಳಿ ಹಟ್ಟಿ ಲಕ್ಕವ್ವನನ್ನು ಕೂರಿಸುವ ಜಾಗದಲ್ಲಿ ಉರುಮಂಜು, ಸುಣ್ಣದಲ್ಲಿ ಪಟ್ಟಿ ಬಳಿಯಲಾಗುತ್ತದೆ. ಹಟ್ಟಿ ಲಕ್ಕವ್ವನನ್ನು ಕೂರಿಸಿದ ಪುಟ್ಟಿಯನ್ನು ಕದಿಯುವ ತಮಾಷೆಯ ಸಂಪ್ರದಾಯ ಕೆಲವು ಕಡೆಗಳಲ್ಲಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಹಟ್ಟಿ ಲಕ್ಕವ್ವನನ್ನು ಕೂರಿಸುವುದನ್ನು ಕೆರಕನ್ನು ಇಡುವುದು ಎಂದೂ ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ತಮ್ಮ ಬಂಧುಗಳು, ಗೆಳೆಯರನ್ನು ಮಾತನಾಡಿಸಿ ಅವರು ಹೂಂ ಎಂದಾಗ, ಕೆರ್ಕೊ ಎಂದು ಹೇಳಲಾಗುತ್ತದೆ. ಇಂತಹ ಹಲವು ಆಚರಣೆಗಳನ್ನು ದೀಪಾವಳಿಯಲ್ಲಿ ಕಾಣಬಹುದಾಗಿದೆ. ದೀಪಾವಳಿ ಸಂಸ್ಕೃತಿ, ಸಂಪ್ರದಾಯ ಸಾರುವ ಹಬ್ಬವಾಗಿದೆ ಎನ್ನಬಹುದು.