ದೀಪಾವಳಿ ಹಿಂದೂಗಳ ಪಾಲಿಗೆ ಅತಿ ದೊಡ್ಡ ಹಬ್ಬ. ದೀಪಾವಳಿಯಂದು ಎಲ್ಲರೂ ಲಕ್ಷ್ಮಿದೇವಿಯನ್ನು ಪೂಜಿಸುತ್ತಾರೆ. ಹೊಸ ಬಟ್ಟೆಗಳನ್ನು ಧರಿಸಿ ಸಿಹಿ ಹಂಚುವ ಸಂಪ್ರದಾಯವಿದೆ. ಮನೆಗಳನ್ನು ದೀಪ ಮತ್ತು ರಂಗೋಲಿಗಳಿಂದ ಅಲಂಕರಿಸುತ್ತಾರೆ. ಈ ರೀತಿ ಮಾಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ಇರುತ್ತದೆ ಎಂಬುದು ನಂಬಿಕೆ.
ದೀಪಾವಳಿಗೆ ಮೊದಲು ಕೆಲವೊಂದು ನಿಯಮಗಳನ್ನು ಪಾಲಿಸಿದ್ರೆ ಹಣವಂತರಾಗುತ್ತಾರೆ. ಈ ಬಗ್ಗೆ ವಾಸ್ತುಶಾಸ್ತ್ರದಲ್ಲಿ ಉಲ್ಲೇಖವಿದೆ. ಈ ಕ್ರಮಗಳನ್ನು ತಪ್ಪದೇ ಮಾಡಬೇಕು.
ಉಪ್ಪು ನೀರು – ದೀಪಾವಳಿಯ ಮುನ್ನಾ ದಿನ ಮನೆಯನ್ನು ಸ್ವಚ್ಛಗೊಳಿಸಬೇಕು. ಇದಕ್ಕಾಗಿ ನೀರಿನಲ್ಲಿ ಸ್ವಲ್ಪ ಉಪ್ಪನ್ನು ಬೆರೆಸಿ ಅದನ್ನು ಮನೆಯಾದ್ಯಂತ ಚಿಮುಕಿಸಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ.
ಹಳ್ಳಿಯ ಚಿತ್ರ – ದೀಪಾವಳಿಯ ಒಂದು ದಿನ ಮೊದಲು ಮನೆಯ ಪಶ್ಚಿಮ ಗೋಡೆಯ ಮೇಲೆ ಹಳ್ಳಿಯ ಚಿತ್ರವನ್ನು ಹಾಕಿ. ಹೀಗೆ ಮಾಡುವುದರಿಂದ ಆದಾಯ ಹೆಚ್ಚುತ್ತದೆ.
ಓಡುವ ಕುದುರೆ – ಹಬ್ಬದ ಮುನ್ನಾದಿನ ಮನೆಯ ದಕ್ಷಿಣ ದಿಕ್ಕಿನಲ್ಲಿ ಓಡುವ ಕುದುರೆಗಳ ಚಿತ್ರವನ್ನು ಹಾಕುವುದು ಮಂಗಳಕರವೆಂದು ಪರಿಗಣಿಸಲಾಗಿದೆ.
ದೇವರ ಪ್ರತಿಮೆ – ನಾವು ಹಬ್ಬದ ಸಮಯದಲ್ಲಿ ದೇವರ ವಿಗ್ರಹಗಳನ್ನು ಕೂಡ ಮನೆಗೆ ತರುತ್ತೇವೆ. ಅವುಗಳನ್ನು ಎಲ್ಲೆಂದರಲ್ಲಿ ಇಡುವ ಬದಲು ದೇವರ ಮನೆಯಲ್ಲಿ ಸೂಕ್ತ ಸ್ಥಾನದಲ್ಲಿ ಇಡುವುದು ಶುಭಕರ.
ಧೂಪದ್ರವ್ಯ– ದೀಪಾವಳಿಗೆ ಮೊದಲು ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುತ್ತದೆ. ಶುಭ್ರವಾದ ಮನೆಯಲ್ಲಿ ಸಕಾರಾತ್ಮಕತೆಯನ್ನು ಕಾಪಾಡಿಕೊಳ್ಳಲು ಧೂಪವನ್ನು ಹಚ್ಚಿ.
ದೀಪಾವಳಿ ಹಬ್ಬಕ್ಕೂ ಮೊದಲು ಈ ಖಚಿತವಾದ ಪರಿಹಾರಗಳನ್ನು ಅಳವಡಿಸಿಕೊಂಡರೆ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯು ಮನೆಯಲ್ಲಿ ನೆಲೆಸುತ್ತಾಳೆ. ಹಣವೃದ್ಧಿಯ ಜೊತೆಗೆ ಸಂತೋಷ ಮತ್ತು ಸಮೃದ್ಧಿ ಸಹ ನಿಮ್ಮದಾಗುತ್ತದೆ.