ಹಬ್ಬ ಹರಿದಿನಗಳಲ್ಲಿ ಸಿಹಿತಿಂಡಿಗಳ ವಿನಿಮಯ ಸಾಮಾನ್ಯ. ಹಬ್ಬ ಎಂದಾಕ್ಷಣ ಸಿಹಿ ತಿನಿಸು ತಿಂದು ಮೋಜು ಮಾಡುತ್ತ, ಆತ್ಮೀಯರು ಬಂಧುಗಳೊಂದಿಗೆ ಕಾಲ ಕಳೆಯುವುದು ವಾಡಿಕೆ. ಆದ್ರೆ ಶುಗರ್ ರೋಗಿಗಳಿಗೆ, ಈಗಾಗ್ಲೇ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ದೀಪಾವಳಿಯಲ್ಲೂ ಸಿಹಿ ತಿನ್ನುವುದು ಅಸಾಧ್ಯ. ಹಬ್ಬಗಳಲ್ಲಿ ಸಿಹಿ ತಿನ್ನಲೇಬೇಕು ಎನಿಸಿದಾಗ ಅದರಲ್ಲಿ ಎಷ್ಟೆಷ್ಟು ಕ್ಯಾಲೋರಿ ಇದೆ ಎಂಬುದನ್ನು ಮೊದಲೇ ತಿಳಿದುಕೊಳ್ಳುವುದು ಉತ್ತಮ.
ಊಟ ಮಾಡಿದ ನಂತರ ಅಥವಾ ಹೊಟ್ಟೆ ತುಂಬಿದ್ದಾಗ ಸಿಹಿ ತಿನಿಸನ್ನು ಸ್ವಲ್ಪವೇ ತಿನ್ನಬೇಕು. ಊಟ ಮಾಡದೇ ಇದ್ದರೆ ಅಥವಾ ಹಸಿದುಕೊಂಡಿದ್ದಾಗ ಸ್ವಲ್ಪ ಜಾಸ್ತಿ ಸೇವಿಸಬಹುದು. ಅತಿಯಾದರೆ ಆರೋಗ್ಯಕ್ಕೇ ಅಪಾಯವಾಗುವ ಸಾಧ್ಯತೆ ಇರುತ್ತದೆ.
ನೀವು ದಿನಕ್ಕೆ ಮೂರು ಅಥವಾ ನಾಲ್ಕು ಬಾರಿ ಆಹಾರ ತಿನ್ನಬೇಕು. ಒಂದಿಡೀ ದಿನದಲ್ಲಿ ನೀವು ಸೇವನೆ ಮಾಡಬೇಕಿರುವುದು ಕೇವಲ 2200 ಕ್ಯಾಲೊರಿ ಮಾತ್ರ. ಊಟ ಅಥವಾ ಉಪಹಾರಗಳಲ್ಲಿ ಹೆಚ್ಚಿನ ಕ್ಯಾಲೋರಿ ಸೇವಿಸಿದ್ದರೆ ಜಾಸ್ತಿ ಸಿಹಿ ತಿಂಡಿಗಳನ್ನು ತಿನ್ನಬಾರದು. ಸಿಹಿ ತಿನಿಸುಗಳನ್ನು ಹೆಚ್ಹೆಚ್ಚು ಸೇವಿಸ್ತಾ ಇದ್ರೆ ನೀವು ನಿಯಮಿತವಾಗಿ ವ್ಯಾಯಾಮ ಮಾಡಬೇಕು ಮತ್ತು ಹೆಚ್ಚು ಹೆಚ್ಚು ನೀರು ಕುಡಿಯಬೇಕು.
ಬೇಕರಿ ಅಥವಾ ಇತರೆಡೆಗಳಿಂದ ಸಿಹಿತಿಂಡಿಗಳನ್ನು ತಂದು ತಿನ್ನಬೇಡಿ. ಮನೆಯಲ್ಲೇ ತಯಾರಿಸಿಕೊಂಡು ತಿನ್ನುವುದು ಉತ್ತಮ. ಆಹಾರ ತಜ್ಞರು ಹೇಳುವ ಪ್ರಕಾರ ಊಟವಾದ ಬಳಿಕ ಸಿಹಿ ತಿನ್ನುವುದು ಸೂಕ್ತ. ಸಿಹಿ ತಿನ್ನುವವರು ಸಾಕಷ್ಟು ನೀರು ಕುಡಿಯಬೇಕು. ಇದರಿಂದ ನಿಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳು ಹೊರಬರುತ್ತವೆ. ಸಾಧ್ಯವಾದರೆ ಸಿಹಿತಿಂಡಿಗಳನ್ನು ಸೇವಿಸಿದ ನಂತರ ಕನಿಷ್ಠ 20 ನಿಮಿಷಗಳ ಕಾಲ ವ್ಯಾಯಾಮ ಮಾಡಿ.
ಇನ್ನು ಯಾವ್ಯಾವ ಆಹಾರದಲ್ಲಿ ಎಷ್ಟೆಷ್ಟು ಕ್ಯಾಲೋರಿ ಇರುತ್ತದೆ ಅನ್ನೋದನ್ನು ನೋಡೋದಾದ್ರೆ, ಏಪ್ರಿಕಾಟ್‌ನಲ್ಲಿ 3.1 ಕ್ಯಾಲೋರಿ, ಒಣದ್ರಾಕ್ಷಿಯಲ್ಲಿ 3.1 ಕ್ಯಾಲೋರಿ, ಪಿಸ್ತಾದಲ್ಲಿ 4.4 ಕ್ಯಾಲೋರಿ, ಗೋಡಂಬಿಯಲ್ಲಿ 6 ಕ್ಯಾಲೋರಿ, ಬಾದಾಮಿಯಲ್ಲಿ 7.9 ಕ್ಯಾಲೋರಿ, ವಾಲ್‌ನಟ್ಸ್‌ನಲ್ಲಿ 14.4 ಕ್ಯಾಲೋರಿ ಮತ್ತು ಖರ್ಜೂರದಲ್ಲಿ 76.1 ಕ್ಯಾಲೋರಿ ಇರುತ್ತದೆ.
ಗುಲಾಬ್ ಜಾಮೂನು: 15 ಗ್ರಾಂ ಕೊಬ್ಬು, 31 ಮಿಗ್ರಾಂ ಕೊಲೆಸ್ಟ್ರಾಲ್, 2 ಗುಲಾಬ್ ಜಾಮೂನಿನಲ್ಲಿ ಸುಮಾರು 380 ಕ್ಯಾಲೋರಿಗಳಿರುತ್ತವೆ.
ರಸಗುಲ್ಲಾ: ಎರಡು ರಸಗುಲ್ಲಾಗಳಲ್ಲಿ 1 ಗ್ರಾಂ ಕೊಬ್ಬು, 2 ಮಿಗ್ರಾಂ ಕೊಲೆಸ್ಟ್ರಾಲ್, 150 ಕ್ಯಾಲೋರಿಗಳು ಇರುತ್ತವೆ.
ಮಿಲ್ಕ್ ಕೇಕ್: 9 ಗ್ರಾಂ ಕೊಬ್ಬು, 20 ಮಿಗ್ರಾಂ ಕೊಲೆಸ್ಟ್ರಾಲ್, 50 ಮಿಲ್ಕ್ ಕೇಕ್‌ನಲ್ಲಿ ಸುಮಾರು 175 ಕ್ಯಾಲೋರಿ ಇರುತ್ತದೆ.
ರಬಡಿ: 1 ಕಪ್ ರಬಡಿಯಲ್ಲಿ 19.9 ಗ್ರಾಂ ಕೊಬ್ಬು, 20 ಮಿಗ್ರಾಂ ಕೊಲೆಸ್ಟ್ರಾಲ್, 1 373.7 ಕ್ಯಾಲೋರಿ ಇರುತ್ತದೆ.
ಮೈಸೂರು ಪಾಕ್: ಇದನ್ನು ತುಪ್ಪದಿಂದ ತಯಾರಿಸಲಾಗುತ್ತದೆ, ಆದ್ದರಿಂದ ಇದರಲ್ಲಿ ಕ್ಯಾಲೋರಿಗಳ ಪ್ರಮಾಣವು ಹೆಚ್ಚು. ಮೈಸೂರು ಪಾಕ್‌ನ ಒಂದು ತುಂಡಿನಲ್ಲಿ ಸುಮಾರು 260 ಕ್ಯಾಲೋರಿಗಳಿರುತ್ತವೆ. ಬೊಜ್ಜಿನ ಸಮಸ್ಯೆ ಇರುವವರು ಮೈಸೂರು ಪಾಕ್ ತಿನ್ನದೇ ಇರುವುದು ಉತ್ತಮ.