ಬೆಳಕಿನ ಹಬ್ಬ ದೀಪಾವಳಿಯಲ್ಲಿ ಸ್ನೇಹಿತರು, ಸಂಬಂಧಿಕರಿಗೆ ಉಡುಗೊರೆ ನೀಡುವ ಪದ್ಧತಿಯಿದೆ. ವಿಶೇಷ ಉಡುಗೊರೆ ಖರೀದಿ ಮಾಡುವಲ್ಲಿ ಜನರು ನಿರತರಾಗಿದ್ದಾರೆ. ಆನ್ಲೈನ್ ಸೇರಿದಂತೆ ಎಲ್ಲ ಕಡೆ ಆಫರ್ ಗಳನ್ನು ನೀಡಲಾಗ್ತಿದೆ. ನೀವೂ ಆಪ್ತರಿಗೆ ಉಡುಗೊರೆ ನೀಡುವ ತಯಾರಿಯಲ್ಲಿದ್ದರೆ ಅವಶ್ಯವಾಗಿ ಇದನ್ನು ಓದಿ. ಲಕ್ಷ್ಮಿ ಮುನಿಕೊಳ್ಳುವ ವಸ್ತುಗಳನ್ನು ಎಂದೂ ಉಡುಗೊರೆಯಾಗಿ ನೀಡಬೇಡಿ.
ಶಾಸ್ತ್ರಗಳ ಪ್ರಕಾರ, ಉಡುಗೊರೆ ಕೊಡುವ ಹಾಗೂ ತೆಗೆದುಕೊಳ್ಳುವವರಿಬ್ಬರ ಮೇಲೂ ಪ್ರಭಾವ ಬೀರುತ್ತದೆ. ದೀಪಾವಳಿ ಸಂದರ್ಭದಲ್ಲಿ ನೀರಿಗೆ ಸಂಬಂಧಿಸಿದ ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು. ದೀಪಾವಳಿ ತಾಯಿ ಲಕ್ಷ್ಮಿಯ ಹಬ್ಬ. ಲಕ್ಷ್ಮಿಗೆ ಸಂಬಂಧಿಸಿದ ವಸ್ತುವನ್ನು ಉಡುಗೊರೆ ನೀಡಬಾರದು. ನೀರು ಲಕ್ಷ್ಮಿಗೆ ಸಂಬಂಧಿಸಿದ ವಸ್ತುವಾಗಿದೆ. ಹಾಗೆ ಅದು ಅಸ್ಥಿರವಾಗಿರುವ ಕಾರಣ ದೀಪಾವಳಿಯಲ್ಲಿ ನೀರಿಗೆ ಸಂಬಂಧಿಸಿದ ವಸ್ತುಗಳನ್ನು ಉಡುಗೊರೆ ನೀಡಬೇಡಿ.
ದೀಪಾವಳಿಯ ಧನ್ ತೇರಸ್ ದಿನ ಅಪಾಯಕಾರಿ ವಸ್ತುಗಳನ್ನು ಖರೀದಿ ಮಾಡುವುದು ಅಶುಭ. ಚಾಕು, ಚೂರಿಯಂತಹ ಮೊನಚಾದ ವಸ್ತುಗಳ ಖರೀದಿ ಮಾಡಬಾರದು. ಇದನ್ನು ಉಡುಗೊರೆ ರೂಪದಲ್ಲಿ ಯಾರಿಗೂ ನೀಡಬಾರದು. ಇದು ಎರಡೂ ಕುಟುಂಬಗಳ ಅಸಂತೋಷ, ದುಃಖಕ್ಕೆ ಕಾರಣವಾಗುತ್ತದೆ.
ಪಾತ್ರೆಯನ್ನು ಉಡುಗೊರೆ ರೂಪದಲ್ಲಿ ನೀಡುತ್ತಿದ್ದರೆ ಜಗ್, ಲೋಟವನ್ನು ನೀಡಬೇಡಿ. ಹಾಗೆ ಚಿನ್ನ, ಬೆಳ್ಳಿ ನಾಣ್ಯದ ಮೇಲೆ ಗಣೇಶ ಮೂರ್ತಿ, ಲಕ್ಷ್ಮಿ, ಕುಬೇರನ ಚಿತ್ರವಿದ್ದರೆ ಅದನ್ನು ನೀಡಬೇಡಿ.
ದೀಪಾವಳಿ ಸಂದರ್ಭದಲ್ಲಿ ಚಿನ್ನ, ಬೆಳ್ಳಿ ಆಭರಣವನ್ನು ಉಡುಗೊರೆ ರೂಪದಲ್ಲಿ ನೀಡುವುದು ಶುಭಕರ. ಆದ್ರೆ ಮೇಲಿನ ವಿಷ್ಯ ನೆನಪಿರಲಿ. ಹಾಗೆ ನಕಲಿ ಆಭರಣಗಳನ್ನು ನೀಡಬೇಡಿ.
ದೀಪಾವಳಿ ಶುಭ ಸಂದರ್ಭದಲ್ಲಿ ಗಣೇಶ ಅಥವಾ ಲಕ್ಷ್ಮಿ ಮೂರ್ತಿಯನ್ನು ಉಡುಗೊರೆ ನೀಡಬೇಡಿ. ಹೀಗೆ ಮಾಡಿದ್ರೆ ನಿಮ್ಮಲ್ಲಿರುವ ಸೌಭಾಗ್ಯ ಬೇರೆಯವರ ಪಾಲಾಗುತ್ತದೆ.