ಪ್ರತಿ ವರ್ಷದಂತೆ ಈ ವರ್ಷವೂ ದೀಪಾವಳಿಯಲ್ಲಿ ಸ್ನೇಹಿತರು, ಸಂಬಂಧಿಕರಿಗೆ ಉಡುಗೊರೆ ಖರೀದಿ ಮಾಡಿರ್ತಿರಿ. ಆದ್ರೆ ಸದಾ ನಮ್ಮ ಒಳಿತನ್ನು ಬಯಸುವ ತಾಯಿಗೆ ಏನೂ ಖರೀದಿ ಮಾಡಿರುವುದಿಲ್ಲ. ಈ ಬಾರಿ ದೀಪಾವಳಿಯನ್ನು ಸ್ವಲ್ಪ ವಿಶೇಷವಾಗಿ ಆಚರಿಸಿ. ನಿಮ್ಮ ಅಮ್ಮನಿಗೆ ಒಂದೊಳ್ಳೆ ಉಡುಗೊರೆ ನೀಡಿ ಆಕೆಗೆ ಸರ್ಪ್ರೈಸ್ ನೀಡಿ.
ಅಮ್ಮನಿಗೆ ಏನು ಇಷ್ಟ? ಯಾವ ಉಡುಗೊರೆ ನೀಡೋದು ಎಂಬ ಪ್ರಶ್ನೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ. ಉಡುಗೊರೆ ನೀಡಲು ಸಾಕಷ್ಟು ವಸ್ತುಗಳಿವೆ. ಅಮ್ಮನಿಗೆ ಯಾವುದು ಅಗತ್ಯ ಎಂಬುದನ್ನು ಗಮನಿಸಿ ನಂತ್ರ ಉಡುಗೊರೆ ನೀಡಿ.
ಇತ್ತೀಚಿನ ದಿನಗಳಲ್ಲಿ ಸಿಲ್ಕ್ ಸಾರಿ ಪ್ರಸಿದ್ಧಿ ಪಡೆಯುತ್ತಿದೆ. ಅಮ್ಮನಿಗೊಂದು ಸಿಲ್ಕ್ ಸಾರಿ ಖರೀದಿ ಮಾಡಿ ಗಿಫ್ಟ್ ನೀಡಬಹುದು. ಅಮ್ಮನಿಗೆ ಇಷ್ಟವಾಗುವ ಬಣ್ಣದ ಸಿಲ್ಕ್ ಸಾರಿ ಖರೀದಿ ಮಾಡಿ ದೀಪಾವಳಿ ದಿನ ಉಡುಗೊರೆ ನೀಡಿ.
ಅಡುಗೆ ಮನೆ ಅಂದ್ರೆ ಅಮ್ಮ ಎಂದರ್ಥ. ಅಡುಗೆ ಮನೆಗೆ ಈ ವಸ್ತು ಬೇಕಿತ್ತು ಎಂಬ ಅಮ್ಮನ ಮಾತು ನಿಮ್ಮ ಕಿವಿಗೆ ಬಿದ್ರೆ ತಡ ಮಾಡಬೇಡಿ. ದೀಪಾವಳಿಗೆ ಅಮ್ಮನಿಷ್ಟದಂತೆ ಅಡುಗೆ ಮನೆ ಪಾತ್ರೆಯನ್ನು ಗಿಫ್ಟ್ ಆಗಿ ನೀಡಿ.
ಅಮ್ಮನಿಗೆ ಮೇಕಪ್ ಮಾಡುವ ಹಕ್ಕಿಲ್ಲ ಎಂದುಕೊಳ್ಳಬೇಡಿ. ಮಕ್ಕಳು-ಮನೆ ಗಲಾಟೆಯಲ್ಲಿ ಅಮ್ಮನಾದವಳು ಮೇಕಪ್ ಮರೆತು ಬಿಡ್ತಾಳೆ. ಈ ಬಾರಿ ಅಮ್ಮನಿಗೆ ಸೌಂದರ್ಯವರ್ಧಕವನ್ನು ಉಡುಗೊರೆಯಾಗಿ ನೀಡಿ ಆಕೆ ಮುಖದಲ್ಲಿ ನಗು ಮೂಡಿಸಬಹುದು.