ದೀಪಾವಳಿಯಂದು ಲಕ್ಷ್ಮಿ ಪೂಜೆ ಮಾಡೋದು ಸಾಮಾನ್ಯ. ಗಣೇಶ, ಲಕ್ಷ್ಮಿ ಹಾಗೂ ವಿಷ್ಣುವಿನ ಪೂಜೆ ಮಾಡಬೇಕೆಂದು ನಾವು ಈಗಾಗ್ಲೇ ಹೇಳಿದ್ದೇವೆ. ಇದ್ರ ಜೊತೆಗೆ ಕೆಲವೊಂದು ವಸ್ತುಗಳಿಗೆ ಪೂಜೆ ಮಾಡಿದ್ರೆ ಲಕ್ಷ್ಮಿಯನ್ನು ಸುಲಭವಾಗಿ ಒಲಿಸಿಕೊಳ್ಳಬಹುದು.
ದೀಪಾವಳಿಯ ಸಂಜೆ ಲಕ್ಷ್ಮಿ ಪೂಜೆ ವೇಳೆ 9 ಗೋಮತಿ ಚಕ್ರವನ್ನು ಇಡಿ. ಅದಕ್ಕೆ ಪೂಜೆ ಮಾಡಿ ನಂತ್ರ ಗೋಮತಿ ಚಕ್ರವನ್ನು ಕಪಾಟಿನಲ್ಲಿಡಿ.
ದೀಪಾವಳಿಯ ದಿನದಂದು ದೇವಸ್ಥಾನಕ್ಕೆ ಹೋಗಿ ತಾಯಿ ಲಕ್ಷ್ಮಿಗೆ ವಸ್ತ್ರವನ್ನು ಅರ್ಪಿಸಿ. ಸುವಾಸನೆಯುಳ್ಳ ಅಗರಬತ್ತಿಯನ್ನು ಹಚ್ಚಿ.
ಲಕ್ಷ್ಮಿ ಪೂಜೆಯ ವೇಳೆ ಕಬ್ಬಿನ ಪೂಜೆ ಮಾಡುವುದನ್ನು ಮರೆಯಬೇಡಿ.
ಲಕ್ಷ್ಮಿ ಪೂಜೆ ವೇಳೆ ಮೂರ್ನಾಲ್ಕು ಕಡಲೆ ಬೇಳೆಯನ್ನು ದೇವಿ ಬಳಿ ಇಟ್ಟು ಪೂಜೆ ಮಾಡಿ.
ದೀಪಾವಳಿಯ ರಾತ್ರಿ ವಿಕಲಾಂಗ ವ್ಯಕ್ತಿಗೆ ಊಟ ನೀಡಿ.