
ದೀಪಾವಳಿ ಸಂಭ್ರಮ ಶುರುವಾಗಿದೆ. ಮನೆಯನ್ನು ದೀಪಗಳಿಂದ ಅಲಂಕಾರ ಮಾಡುವ ಜೊತೆಗೆ ಬಗೆ ಬಗೆಯ ಸಿಹಿ ತಿಂಡಿಗಳು ದೀಪಾವಳಿ ಸಡಗರವನ್ನು ಹೆಚ್ಚಿಸುತ್ತವೆ. ದೀಪಾವಳಿಯಂದು ಮನೆಯಲ್ಲಿಯೇ ಹೊಸ ರುಚಿಗಳ ಪ್ರಯೋಗ ಮಾಡಿ. ಈ ಬಾರಿ ಕೇಸರಿ ಪೇಡಾ ಮಾಡಿ ದೀಪಾವಳಿಯನ್ನು ಮತ್ತಷ್ಟು ಕಲರ್ ಫುಲ್ ಮಾಡಿ.
BIG NEWS: ‘ಡ್ರಗ್ಸ್ ಸಿಟಿ’ ಟ್ವೀಟಾಸ್ತ್ರಕ್ಕೆ ಕಾಂಗ್ರೆಸ್ ವಿರುದ್ಧ ಚಾಟಿ ಬೀಸಿದ BJP
ಕೇಸರಿ ಪೇಡಾ ಮಾಡಲು ಬೇಕಾಗುವ ಪದಾರ್ಥ :
ಹಾಲು – ಅರ್ಧ ಲೀಟರ್
ಕೇಸರಿ -1/4 ಚಮಚ
ಸಕ್ಕರೆ – 120 ಗ್ರಾಂ
ಕಾರ್ನ್ ಪ್ಲೋರ್ – 1 ಚಮಚ
ನಿಂಬೆ ರಸ – 1 ಚಮಚ
ಒಣ ಹಣ್ಣು – ಅಲಂಕಾರಕ್ಕೆ
ಕೇಸರಿ ಪೇಡಾ ಮಾಡುವ ವಿಧಾನ :
ಎರಡು ಚಮಚ ಹಾಲಿಗೆ ಒಂದು ಚಮಚ ಕೇಸರಿ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ. ಇನ್ನೊಂದು ಪಾತ್ರೆಗೆ ಹಾಲನ್ನು ಹಾಕಿ ಬಿಸಿ ಮಾಡಿ. ಹಾಲಿಗೆ ಸಕ್ಕರೆ ಹಾಗೂ ಕೇಸರಿ ಮಿಶ್ರಣವನ್ನು ಬೆರೆಸಿ. ಹಾಲು ದಪ್ಪವಾಗುವವರೆಗೆ ಕೈ ಆಡಿಸುತ್ತಿರಿ. ನಂತ್ರ ಸ್ವಲ್ಪ ಹಾಲಿಗೆ ಕಾರ್ನ್ ಫ್ಲೋರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅದನ್ನು ಬಿಸಿ ಹಾಲಿಗೆ ಹಾಕಿ. ಜೊತೆಗೆ ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಹಾಲು ಮತ್ತಷ್ಟು ದಪ್ಪವಾಗಿ ಉಂಡೆ ಮಾಡುವ ಹದಕ್ಕೆ ಬಂದ ಮೇಲೆ ಗ್ಯಾಸ್ ಬಂದ್ ಮಾಡಿ. ಮಿಶ್ರಣ ತಣ್ಣಗಾದ ಮೇಲೆ ಪೇಡೆ ರೀತಿಯಲ್ಲಿ ಉಂಡೆ ಕಟ್ಟಿ. ಇದ್ರ ಮೇಲೆ ಒಣ ಹಣ್ಣನ್ನು ಅಲಂಕರಿಸಿ.