alex Certify ʼದಿ ಕಾಶ್ಮೀರಿ ಫೈಲ್ಸ್ʼ​ ಬಿಡುಗಡೆ ಬಳಿಕ ಮಹತ್ವದ ಹೇಳಿಕೆ ನೀಡಿದ ಪ್ರಧಾನಿ ಮೋದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼದಿ ಕಾಶ್ಮೀರಿ ಫೈಲ್ಸ್ʼ​ ಬಿಡುಗಡೆ ಬಳಿಕ ಮಹತ್ವದ ಹೇಳಿಕೆ ನೀಡಿದ ಪ್ರಧಾನಿ ಮೋದಿ

ದೇಶದಲ್ಲಿ ‘ದಿ ಕಾಶ್ಮೀರ ಫೈಲ್ಸ್​’ ಸಿನಿಮಾದ ಬಗ್ಗೆ ಪರ ವಿರೋಧದ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಸತ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗಿತ್ತು ಎಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ ಈ ಹೇಳಿಕೆಯನ್ನು ನೀಡಿದ್ದಾರೆ. ನಿರ್ಮಾಪಕ ಅಗ್ನಿ ಹೋತ್ರಿ ಸಿನಿಮಾದಲ್ಲಿ, ಕಣಿವೆಯಿಂದ ಕಾಶ್ಮೀರಿ ಪಂಡಿತರ ವಲಸೆ ಬಗ್ಗೆ ಹೇಳಲಾಗಿದೆ.

ಮಾರ್ಚ್​ 11ರಂದು ಈ ಸಿನಿಮಾವು ಥಿಯೇಟರ್​ನಲ್ಲಿ ರಿಲೀಸ್​ ಆಗಿದೆ. 1990ರ ದಶಕದಲ್ಲಿ ನಡೆದ ನೈಜ ಘಟನೆಗಳು ಹಾಗೂ ಸತ್ಯವನ್ನು ಆಧರಿಸಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ. ಈ ಸಿನಿಮಾವನ್ನು ನೋಡಲು ಹೆಚ್ಚಿನ ಸಂಖ್ಯೆಯ ಜನರು ಥಿಯೇಟರ್​ನತ್ತ ಧಾವಿಸುತ್ತಿದ್ದಾರೆ.

ಸಿನಿಮಾದ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ, ಪತ್ನಿ ಹಾಗೂ ನಟಿ ಪಲ್ಲವಿ ಜೋಶಿ ಹಾಗೂ ನಿರ್ಮಾಪಕ ಅಭಿಷೇಕ್​ ಅರ್ಗವಾಲ್​​ ಶನಿವಾರ ಪ್ರಧಾನಿ ಮೋದಿಯನ್ನು ಭೇಟಿಯಾದರು. ಪ್ರಧಾನಿ ನಮ್ಮ ಸಿನಿಮಾಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಅಭಿಷೇಕ್​ ಹೇಳಿದರು. ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾದಲ್ಲಿ ಅನುಪಮ್ ಖೇರ್​, ಮಿಥುನ್​ ಚಕ್ರವರ್ತಿ ಹಾಗೂ ದರ್ಶನ್​ ಕುಮಾರ್​ರಂತಹ ದಿಗ್ಗಜರು ನಟಿಸಿದ್ದಾರೆ.

ಈ ಸಿನಿಮಾದ ಬಗ್ಗೆ ರಾಜಕೀಯ ವಿವಾದವೂ ಶುರುವಾಗಿದೆ. ಕೇರಳ ಕಾಂಗ್ರೆಸ್‌ನ ಸರಣಿ ಟ್ವೀಟ್‌ಗಳಿಂದ ವಿವಾದ ಪ್ರಾರಂಭವಾಯಿತು. 1990 ಮತ್ತು 2007 ರ ನಡುವಿನ 17 ವರ್ಷಗಳಲ್ಲಿ ಭಯೋತ್ಪಾದಕ ದಾಳಿಯಲ್ಲಿ ಕಾಶ್ಮೀರಿ ಪಂಡಿತರಿಗಿಂತ ಹೆಚ್ಚಿನ ಮುಸ್ಲಿಮರು ಸಾವನ್ನಪ್ಪಿದ್ದಾರೆ ಎಂದು ಕೇರಳ ಕಾಂಗ್ರೆಸ್ ಹೇಳಿಕೊಂಡಿದೆ. ಕಣಿವೆಯಿಂದ ಕಾಶ್ಮೀರಿ ಪಂಡಿತರ ವಲಸೆ ಪ್ರಾರಂಭವಾಯ್ತೋ ಆಗ, ಜಮ್ಮು ಮತ್ತು ಕಾಶ್ಮೀರದ ಗವರ್ನರ್ ಜಗಮೋಹನ್ ಆಗಿದ್ದರು ಹಾಗೂ ಇವರು ಓರ್ವ ಆರ್​ಎಸ್​ಎಸ್​ ವ್ಯಕ್ತಿ ಎಂದು ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...