ಫುಡ್ ಡೆಲಿವರಿ ದಿಗ್ಗಜ ಸ್ವಿಗ್ಗಿ ದಿನಸಿ ಸಾಮಗ್ರಿಗಳನ್ನು ತ್ವರಿತವಾಗಿ ಡೆಲಿವರಿ ಮಾಡುವ ಸೇವೆ ನೀಡಲು ಆರಂಭಿಸಿರುವ ’ಇನ್‌ಸ್ಟಾಸ್ಮಾರ್ಟ್’ ಸೇವೆಯ ಮೇಲೆ $700 ದಶಲಕ್ಷ (5,250 ಕೋಟಿ ರೂಪಾಯಿ) ಹೂಡಿಕೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
2020ರಲ್ಲಿ ಗುರುಗ್ರಾಮ ಹಾಗೂ ಬೆಂಗಳೂರಿನಲ್ಲಿ ಲಾಂಚ್ ಆಗಿರುವ ಸ್ವಿಗ್ಗಿ ಇನ್‌ಸ್ಟಾಸ್ಮಾರ್ಟ್ ಇದೀಗ ದೇಶದ 18 ನಗರಗಳಲ್ಲಿ ವಾರಕ್ಕೆ ಮಿಲಿಯನ್‌ಗಟ್ಟಲೇ ಆರ್ಡರ್‌ಗಳನ್ನು ಡೆಲಿವರಿ ಮಾಡುತ್ತಿದೆ. ಪ್ರತಿ ದಿನವೂ ಒಂದರಂತೆ ಮಾರಾಟಗಾರರು ನಿರ್ವಹಿಸುವ ಡಾಕ್ ಸ್ಟೋರ್ ಅನ್ನು ತನ್ನ ಜಾಲಕ್ಕೆ ಸೇರಿಸಿಕೊಳ್ಳುತ್ತಾ ಸಾಗಿದೆ ಸ್ವಿಗ್ಗಿ ಇನ್‌ಸ್ಟಾಸ್ಮಾರ್ಟ್.
“ನಮ್ಮ ಸದ್ಯದ ಪ್ರಗತಿ ದರದಲ್ಲಿ, ಮುಂದಿನ ಮೂರು ತ್ರೈಮಾಸಿಕದ ಅವಧಿಯಲ್ಲಿ ಇನ್‌ಸ್ಟಾಸ್ಮಾರ್ಟ್ ಒಂದು ಶತಕೋಟಿ ಡಾಲರ್‌ನಷ್ಟು ಮೌರುಕಟ್ಟೆ ಮೌಲ್ಯದ ಸಂಸ್ಥೆಯಾಗುವ ನಿರೀಕ್ಷೆಯಿದೆ. ನಮ್ಮ ಫುಡ್ ಡೆಲಿವರಿ ಉದ್ಯಮದ ಮಾರುಕಟ್ಟೆ ಮೌಲ್ಯವು ಮೂರು ಶತಕೋಟಿ ಡಾಲರ್‌ನಷ್ಟಿದೆ. ನಮ್ಮ ಹೊಸ ಅನುಕೂಲದ ಮಿಶನ್ ನಿಜಜೀವನಕ್ಕೆ ದೊಡ್ಡ ಮಟ್ಟದಲ್ಲಿ ಬರುವುದನ್ನು ನೋಡಲು ಉತ್ಸುಕರಿದ್ದೇವೆ,” ಎಂದು ಸ್ವಿಗ್ಗಿ ಸಿಇಓ ಶ್ರೀಹರ್ಷ ಮಜೆಟಿ ತಿಳಿಸಿದ್ದಾರೆ.
ಹಣ್ಣು-ತರಕಾರಿಗಳು, ಬ್ರೆಡ್ ಮತ್ತು ಮೊಟ್ಟೆ, ಅಡುಗೆ ಸಾಮಗ್ರಿ, ಪೇಯಗಳು, ಇನ್‌ಸ್ಟಾಂಟ್ ಫುಡ್, ವೈಯಕ್ತಿಕ ಮತ್ತು ಬೇಬಿ ಕೇರ್, ಗೃಹ ಹಾಗೂ ಸ್ವಚ್ಛತೆ ಪರಿಕರಗಳು ಸೇರಿದಂತೆ ಬಹಳಷ್ಟು ಸಾಮಗ್ರಿಗಳನ್ನು ಪ್ಲಾಟ್‌ಫಾರಂನಲ್ಲಿ ಡೆಲಿವರಿ ಮಾಡಲಾಗುತ್ತದೆ.