alex Certify ದಿನವಿಡೀ ಸ್ಟ್ರಾಂಗ್‌ ಆಗಿರಲು ಮಕ್ಕಳಿಗೆ ಕೊಡಿ ಈ ಉಪಹಾರ..…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿನವಿಡೀ ಸ್ಟ್ರಾಂಗ್‌ ಆಗಿರಲು ಮಕ್ಕಳಿಗೆ ಕೊಡಿ ಈ ಉಪಹಾರ..…!

ಬೆಳಗಿನ ಉಪಾಹಾರವು ಬಹಳ ಮುಖ್ಯವಾದ ಆಹಾರ. ಬೆಳಗ್ಗೆ ನಾವು ಸೇವಿಸುವ ಆಹಾರಗಳು ದಿನವಿಡೀ ನಮಗೆ ಶಕ್ತಿ ತುಂಬುತ್ತವೆ. ಹಾಗಾಗಿ ಮಕ್ಕಳಿಗೆ ಬೆಳಗ್ಗೆ ಆರೋಗ್ಯಕರ ಉಪಹಾರವನ್ನೇ ನೀಡಬೇಕು. ಅದರಲ್ಲೂ ಪ್ರಮುಖವಾಗಿ ಶಾಲೆಗೆ ಹೋಗುವ ಮಕ್ಕಳು ಬೆಳಗ್ಗೆ ಪೌಷ್ಠಿಕಾಂಶ ಭರಿತ ಉಪಹಾರ ಸೇವನೆ ಮಾಡುವುದರಿಂದ ದಿನವಿಡೀ ಆಯಾಸವನ್ನು ಅನುಭವಿಸುವುದಿಲ್ಲ.

ಅವಕಾಡೊ – ಅವಕಾಡೊ ಉತ್ತಮವಾದ ಕೊಬ್ಬು ಮತ್ತು ಪೋಷಕಾಂಶಗಳಿರುವ ಅತ್ಯಂತ ಆರೋಗ್ಯಕರ ಹಣ್ಣು. ಇದನ್ನು ತಿನ್ನುವುದರಿಂದ ಮಗುವಿನ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ. ಅತಿಯಾಗಿ ತಿನ್ನದೇ ತೂಕವನ್ನು ಸಹ ಕಾಪಾಡಿಕೊಳ್ಳಬಹುದು. ಬೆಳಗಿನ ತಿಂಡಿಗೆ ಅವಕಾಡೋ ಸೇವನೆ ಮಾಡುವುದರಿಂದ ಮಕ್ಕಳಿಗೆ ದಿನವಿಡೀ ಶಕ್ತಿ ದೊರೆಯುತ್ತದೆ ಮತ್ತು ಮಗುವಿನ ಏಕಾಗ್ರತೆಯೂ ಹೆಚ್ಚುತ್ತದೆ.

ಮೊಟ್ಟೆ – ಮೊಟ್ಟೆಗಳು ಪ್ರೋಟೀನ್ ಮತ್ತು ಇತರ ಅನೇಕ ಅಗತ್ಯ ಪೋಷಕಾಂಶಗಳಿಂದ ತುಂಬಿವೆ. ಬೇಯಿಸಿದ ಮೊಟ್ಟೆ ಅಥವಾ ಆಮ್ಲೆಟ್‌ ಅನ್ನು ಮಕ್ಕಳಿಗೆ ನೀಡಬಹುದು. ಇದು ಮಕ್ಕಳ ದೇಹವನ್ನು ಬಲಪಡಿಸುತ್ತದೆ.

ಮೊಸರು – ಮೊಸರು ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದು ನಮಗೆಲ್ಲ ತಿಳಿದಿದೆ. ಅದಕ್ಕೆ ಬೆರ್ರಿ ಹಣ್ಣುಗಳನ್ನು ಸೇರಿಸಿದರೆ ಮಕ್ಕಳಿಗೆ ಮತ್ತಷ್ಟು ಪೌಷ್ಠಿಕಾಂಶ ಸಿಗುತ್ತದೆ. ಮೊಸರು ಮತ್ತು ಬೆರ್ರಿ ಹಣ್ಣುಗಳ ಕಾಂಬಿನೇಷನ್‌ ಸಂಜೆಯವರೆಗೂ ಮಕ್ಕಳನ್ನು ಫ್ರೆಶ್‌ ಆಗಿಡುತ್ತದೆ.

ಓಟ್ಸ್‌ – ನಮ್ಮಲ್ಲಿ ಹಲವರು ಓಟ್ಸ್ ಅನ್ನು ಆರೋಗ್ಯಕರ ಉಪಹಾರವಾಗಿ ಸೇವಿಸುತ್ತಾರೆ. ಅದನ್ನು ಬೆಳಗ್ಗೆ ಮಕ್ಕಳಿಗೆ ಸಹ ತಿನ್ನಿಸಬಹುದು. ಇದರಲ್ಲಿ ಆರೋಗ್ಯಕರ ಕೊಬ್ಬು, ಆರೋಗ್ಯಕರ ಕ್ಯಾಲೋರಿಗಳು, ಪ್ರೋಟೀನ್, ಫೈಬರ್ ಮತ್ತು ಕಾರ್ಬೋಹೈಡ್ರೇಟ್‌ಗಳಂತಹ ಪೋಷಕಾಂಶಗಳಿರುತ್ತವೆ. ಇದು ಮಕ್ಕಳ ಇಡೀ ದಿನದ ಅನೇಕ ಅಗತ್ಯಗಳನ್ನು ಪೂರೈಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...