alex Certify ದಿನವಿಡಿ ನನ್ನ ವಿಡಿಯೋ ಮಾಡ್ತೀರಾ ಅಂತಾ ತಂದೆ ಬಳಿ ಜಗಳ ಕಾಯ್ದ ಪುಟ್ಟ ಪೋರ; ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಮುದ್ದಾದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿನವಿಡಿ ನನ್ನ ವಿಡಿಯೋ ಮಾಡ್ತೀರಾ ಅಂತಾ ತಂದೆ ಬಳಿ ಜಗಳ ಕಾಯ್ದ ಪುಟ್ಟ ಪೋರ; ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಮುದ್ದಾದ ವಿಡಿಯೋ

Viral Video: This Boy's Rant About Parents Filming Their Kids All The Time is Too Funny To Miss. Watchಸಾಮಾಜಿಕ ಮಾಧ್ಯಮದಲ್ಲಿ ಇಂಟ್ರೆಸ್ಟಿಂಗ್, ತಮಾಷೆಯ ಮುಂತಾದ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿರುತ್ತದೆ. ಸಾಕುಪ್ರಾಣಿಗಳು, ಮಕ್ಕಳ ವಿಡಿಯೋಗಳು ಬಹಳ ಮುದ್ದಾಗಿರುತ್ತವೆ. ಮಕ್ಕಳು ಮಾತನಾಡುವ, ಜಗಳವಾಡುವ ಇತ್ಯಾದಿ ವಿಡಿಯೋಗಳು ಮನಸ್ಸನ್ನು ಮುದಗೊಳಿಸುತ್ತದೆ.

ಅಂತಹ ಮತ್ತೊಂದು ಆರಾಧ್ಯ ವಿಡಿಯೋ ವೈರಲ್ ಆಗಿದ್ದು, ಅದನ್ನು ಮಗುವಿನ ಪೋಷಕರು ರೆಕಾರ್ಡ್ ಮಾಡಿದ್ದಾರೆ. ಈ ಬಾರಿ ಹತಾಶೆಗೊಂಡ ಬಾಲಕನ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ್ರೆ ಮಾತ್ರ ನೀವು ಬಿದ್ದು, ಬಿದ್ದು ನಗೋದ್ರಲ್ಲಿ ಸಂಶಯವೇ ಇಲ್ಲ.

ಬಾಲಕನನ್ನು ಮೋಲಿಕ್ ಜೈನ್ ಎಂದು ಗುರುತಿಸಲಾಗಿದ್ದು, ಈಗಾಗಲೇ ಸ್ವಲ್ಪಮಟ್ಟಿಗೆ ಇನ್ಸ್ಟಾಗ್ರಾಂ ಸ್ಟಾರ್ ಆಗಿದ್ದಾನೆ. ಅವರ ಪುಟವು 15,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ. ಇತ್ತೀಚಿನ ರೀಲ್‌ನಲ್ಲಿ, ಮುದ್ದಾದ ಬಾಲಕ ಸ್ವಲ್ಪ ಕಬ್ಬಿನ ರಸವನ್ನು ಹೀರುತ್ತಾ ಕಾರಿನಲ್ಲಿ ಕುಳಿತಿದ್ದಾನೆ. ಬಾಲಕನಿಗೆ ತಂದೆ ಹಲೋ ಎನ್ನುತ್ತಾ ರೆಕಾರ್ಡ್ ಮಾಡಲು ಶುರು ಮಾಡಿದ್ದಾರೆ.

ಈ ವೇಳೆ ಬಾಲಕ ತನ್ನ ತಂದೆಯ ಮೇಲೆ ಕೋಪಗೊಂಡಿದ್ದಾನೆ. ಅರೆ, ತಾನು ಏನನ್ನಾದ್ರೂ ತಿನ್ನುತ್ತಿದ್ರೆ, ಕುಡಿಯುತ್ತಿದ್ರೆ, ನೀವು ಕ್ಯಾಮರಾ ಆನ್ ಮಾಡುತ್ತೀರಲ್ವಾ. ಅಂದ್ರೆ ತಾನು ನಿಮಗೆ ಅಷ್ಟು ಕ್ಷುಲ್ಲಕನಾಗಿದ್ದೇನಾ..? ನೀವು ಏನು ಮಾಡಲು ಬಿಡುವುದಿಲ್ಲ ಅಂತೆಲ್ಲಾ ಹೇಳುತ್ತಾ ಗರಂ ಆಗಿ ತಂದೆಗೆ ಪ್ರಶ್ನಿಸಿದ್ದಾನೆ. ಇಡೀ ದಿನ ವಿಡಿಯೋ, ವಿಡಿಯೋ, ವಿಡಿಯೋ ಅಂತಾನೇ ಮಾಡ್ತಾ ಇರ್ತೀರಾ ಅಂತಾ ಸಿಟ್ಟಾಗಿದ್ದಾನೆ.

ಮಗನ ಪ್ರಕೋಪಕ್ಕೆ ತಂದೆ ಬೆವತು ಹೋಗಿದ್ದಾರೆ. ಜ್ಯೂಸ್ ಮಾತ್ರ ಸೇವಿಸುತ್ತಿದ್ದೀಯ ಅಥವಾ ಬೇರೆ ಏನಾದ್ರೂ ಕುಡಿತಾ ಇದ್ದೀಯಾ ಅಂತಾ ತಂದೆ ಪ್ರಶ್ನಿಸಿದ್ದಾನೆ. ಸದ್ಯ, ಈ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ನೆಟ್ಟಿಗರು ನಗುವ ಎಮೋಜಿಗಳೊಂದಿಗೆ ಕಾಮೆಂಟ್‌ ವಿಭಾಗದಲ್ಲಿ ಪ್ರವಾಹಗೈದಿದ್ದಾರೆ. ಈ ವಿಡಿಯೋ 2.6 ಮಿಲಿಯನ್ ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...