ಕೆಲವರು ಬಹಳ ಬೇಗನೆ ಆಯಾಸಗೊಳ್ಳುತ್ತಾರೆ. ಇದರಿಂದ ಅವರಿಗೆ ದಿನವಿಡೀ ಯಾವ ಕೆಲಸ ಮಾಡಲು ಆಗುವುದಿಲ್ಲ. ಅಂತವರು ತಮ್ಮ ದಿನವನ್ನು ಈ ರೀತಿ ಪ್ರಾರಂಭಿಸಿದರೆ ಅವರು ದಿನವಿಡೀ ಶಕ್ತಿಯುತವಾಗಿರುತ್ತಾರೆ.
ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಬೆಳಿಗ್ಗೆ ವಾಕಿಂಗ್ ಮಾಡಬೇಕು. ದಿನದ ಆರಂಭದಲ್ಲಿ 20ರಿಂದ 30 ನಿಮಿಷಗಳ ಕಾಲ ನಡೆಯುವುದರಿಂದ ದಿನದ ಕೆಲಸ ಮಾಡಲು ಸಾಕಷ್ಟು ಶಕ್ತಿ ಸಿಗುತ್ತದೆ.
ಹಾಗೇ ದಿನವನ್ನು ಆರಂಭಿಸುವಾಗ ಬೆಳಿಗ್ಗೆ ಕಾಫಿ, ಟೀ ಕುಡಿದು ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಬದಲು ತಾಜಾ ಹಣ್ಣಿನ ರಸಗಳನ್ನು ಸೇವಿಸಿ. ಇದರಿಂದ ನಿಮ್ಮ ದೇಹಕ್ಕೆ ದಿನವಿಡೀ ಎನರ್ಜಿ ಸಿಗುತ್ತದೆ.
ಒಂದೇ ಕಡೆ ಕುಳಿತುಕೊಳ್ಳುವ ಬದಲು ನಡೆದಾಡುತ್ತಿರಿ. ಇದರಿಂದ ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಆಮ್ಲಜನಕದ ಮಟ್ಟ ಹೆಚ್ಚಾಗಲು ಸಹಕಾರಿಯಾಗಿದೆ. ಹೀಗೆ ನಡೆದಾಡುವುದರಿಂದ ರಾತ್ರಿ ಚೆನ್ನಾಗಿ ನಿದ್ರೆ ಬರುತ್ತದೆ.