ದಿನದ ಆರಂಭ ಶುಭವಾಗಿದ್ದರೆ ದಿನ ಪೂರ್ತಿ ಶುಭವಾಗಿರುತ್ತದೆ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ. ದಿನ ಶುಭವಾಗಿರಲು ಆರಂಭದಲ್ಲಿ ಯಾವ ಕೆಲಸವನ್ನು ಮಾಡಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಜೊತೆಗೆ ಯಾವ ಕೆಲಸ ಮಾಡಿದ್ರೆ ದಿನಪೂರ್ತಿ ಕೆಟ್ಟದಾಗಿರುತ್ತದೆ ಎಂಬುದನ್ನೂ ಹೇಳಲಾಗಿದೆ.
ಬೆಳಿಗ್ಗೆ ಎದ್ದು ಕಣ್ಣು ಬಿಟ್ಟ ತಕ್ಷಣ ಶುಭ ವಸ್ತುಗಳನ್ನು ನೋಡಬೇಕು. ಹಾಗಾಗಿ ಅಶುಭ ವಸ್ತುಗಳನ್ನು ಮಲಗುವ ಕೋಣೆಯಲ್ಲಿಡಬಾರದು. ಬೆಳಿಗ್ಗೆ ಎದ್ದ ತಕ್ಷಣ ಅಪ್ಪಿತಪ್ಪಿಯೂ ಕನ್ನಡಿಯನ್ನು ನೋಡಬೇಡಿ. ಮಲಗುವ ಕೋಣೆಯಲ್ಲಿ ಕನ್ನಡಿ ಇಡಬಾರದೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಅನಿವಾರ್ಯವಾದಲ್ಲಿ ಮಲಗುವ ಮೊದಲು ಕನ್ನಡಿಯನ್ನು ಪರದೆಯಲ್ಲಿ ಮುಚ್ಚಿಡಿ. ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿ ನೋಡುವುದು ತಪ್ಪುತ್ತದೆ. ಇದ್ರಿಂದ ದಿನ ಶುಭವಾಗಿರುತ್ತದೆ.
ಮನೆಯಲ್ಲಿ ಕಾಡು ಪ್ರಾಣಿಗಳು ಹಾಗೂ ಕ್ರೂರ ಪ್ರಾಣಿಗಳ ಫೋಟೋಗಳನ್ನು ಇಡಬೇಡಿ. ಹಿಂಸೆ ಚಿತ್ರಗಳು ಕೂಡ ನಕಾರಾತ್ಮಕ ಶಕ್ತಿಯನ್ನು ಹರಡುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಆ ಫೋಟೋಗಳನ್ನು ನೋಡಿದಲ್ಲಿ ಮನಸ್ಸು ಕ್ರೋಧಗೊಳ್ಳುತ್ತದೆ. ಚಂಚಲವಾಗುತ್ತದೆ. ಸಿಟ್ಟು, ಕಿರಿಕಿರಿ ಇಡೀ ದಿನ ಕಾಡುತ್ತದೆ.
ಈ ಹಿಂದೆ ಹೇಳಿದಂತೆ ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಕೈ ರೇಖೆಯನ್ನು ನೋಡಿಕೊಂಡು ಕರಾಗ್ರೆ ಮಂತ್ರ ಜಪಿಸಿ. ನಂತ್ರ ಹಾಸಿಗೆಯಿಂದ ನೆಲಕ್ಕೆ ಕಾಲಿಡುವ ಮೊದಲು ಭೂತಾಯಿಗೆ ನಮಸ್ಕರಿಸಿ. ನಂತ್ರ ನಿತ್ಯಕರ್ಮ ಮುಗಿಸಿ ಸೂರ್ಯನಿಗೆ ನಮಸ್ಕರಿಸಿ.