alex Certify ದಿನಕ್ಕೊಂದು ʼಏಲಕ್ಕಿʼ ತಿಂದ್ರೆ ಕರಗುತ್ತೆ ಕೊಬ್ಬು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿನಕ್ಕೊಂದು ʼಏಲಕ್ಕಿʼ ತಿಂದ್ರೆ ಕರಗುತ್ತೆ ಕೊಬ್ಬು

ಆಹಾರ ಪದಾರ್ಥಗಳ ರುಚಿಯನ್ನು ಹೆಚ್ಚಿಸುವ ಮಸಾಲೆ ಪದಾರ್ಥ ಹಸಿರು ಏಲಕ್ಕಿ. ಸಿಹಿ ಆಹಾರ ಸೇರಿದಂತೆ ಪುಲಾವ್ ನಂತಹ ಮಸಾಲೆ ಅಡುಗೆಗೆ ಅಗತ್ಯವಾಗಿ ಏಲಕ್ಕಿ ಬಳಸುತ್ತಾರೆ. ಬಾಯಿ ರುಚಿ ಹೆಚ್ಚಿಸಲು ಕೂಡ ಅನೇಕರು ಏಲಕ್ಕಿ ಸೇವನೆ ಮಾಡ್ತಾರೆ. ಏಲಕ್ಕಿ ಆಹಾರದ ಜೊತೆ ಆರೋಗ್ಯಕ್ಕೂ ಒಳ್ಳೆಯದು.

ಅನೇಕರಿಗೆ ಏಲಕ್ಕಿಯಲ್ಲಿರುವ ವಿಶೇಷ ಗುಣದ ಬಗ್ಗೆ ತಿಳಿದಿಲ್ಲ. ಏಲಕ್ಕಿ ಬೊಜ್ಜು ಕಡಿಮೆ ಮಾಡುವ ಕೆಲಸ ಮಾಡುತ್ತದೆ. ಪ್ರತಿ ದಿನ ಏಲಕ್ಕಿ ಸೇವನೆ ಮಾಡುವುದ್ರಿಂದ ತೂಕ ಇಳಿಯುವ ಜೊತೆಗೆ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಏಲಕ್ಕಿಯಲ್ಲಿ ಕೊಬ್ಬಿನ ವಿರುದ್ಧ ಹೋರಾಡುವ ಗುಣವಿದೆ. ಹೊಟ್ಟೆ ಅಕ್ಕಪಕ್ಕ ಇರುವ ಬೊಜ್ಜು ಹೆಚ್ಚಾಗದಂತೆ ಇದು ತಡೆಯುತ್ತದೆ.

ಏಲಕ್ಕಿ ಹಸಿವನ್ನು ಕಡಿಮೆ ಮಾಡುವ ಗುಣವನ್ನೂ ಹೊಂದಿದೆ. ಇದ್ರಿಂದ ನೀವು ತೂಕವನ್ನು ಸುಲಭವಾಗಿ ಕಡಿಮೆ ಮಾಡಬಹುದು. ಹಸಿವೆಯಾಗದೆ ಇದ್ರೂ ಅನೇಕರು ಆಹಾರ ಸೇವನೆ ಮಾಡ್ತಾರೆ. ಸಿಹಿ ತಿನ್ನುತ್ತಾರೆ. ಏಲಕ್ಕಿ ಸೇವನೆ ಮಾಡುತ್ತಿದ್ದರೆ ಈ ಹವ್ಯಾಸ ಕಡಿಮೆಯಾಗುತ್ತದೆ.

ಏಲಕ್ಕಿಯನ್ನು ಪುಡಿ ಮಾಡಿ ಅಥವಾ ಸಿಪ್ಪೆ ಸಮೇತ ನೀರಿನಲ್ಲಿ ಹಾಕಿ ಒಂದು ರಾತ್ರಿ ನೆನೆಸಿಡಿ. ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ.

ಟೀಗೆ ಏಲಕ್ಕಿ ಹುಡಿಯನ್ನು ಬಳಸಿ. ನೆನಪಿರಲಿ ಏಲಕ್ಕಿ ಟೀಗೆ ಸಕ್ಕರೆ ಹಾಕಬೇಡಿ.

ಸಮಯ ಸಿಕ್ಕಾಗ ಸಿಪ್ಪೆ ಸಮೇತ ಹಸಿರು ಏಲಕ್ಕಿಯನ್ನು ತಿನ್ನಿ. ಇದು ಜೀರ್ಣಕ್ರಿಯೆಯನ್ನು ಸರಳಗೊಳಿಸಿ, ದೇಹಕ್ಕೆ ಫೈಬರ್ ಒದಗಿಸುತ್ತದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...