ಕೆಲವು ಮನೆಗಳಲ್ಲಿ ರೆಫ್ರಿಜರೇಟರ್ ಇಡೀ ದಿನ ಕಾರ್ಯನಿರ್ವಹಿಸುತ್ತದೆ. ರೆಫ್ರಿಜರೇಟರ್ ಅನ್ನು ಅನೇಕ ಬಾರಿ ಆಫ್ ಮಾಡಿ ಅದನ್ನು ಸ್ವಚ್ಛಗೊಳಿಸುವವರೂ ಇದ್ದಾರೆ. ರೆಫ್ರಿಜರೇಟರ್ ಇಡೀ ವರ್ಷ ಚಾಲನೆಯಲ್ಲಿರುತ್ತದೆ, ನಾವು ಅದನ್ನ ಒಂದು ಗಂಟೆ ಕೂಡ ಆಫ್ ಮಾಡುವುದಿಲ್ಲ. ರೆಫ್ರಿಜರೇಟರ್ ಅನ್ನು ಪ್ರತಿದಿನ ಅಥವಾ ಪ್ರತಿ ವಾರ 2 ರಿಂದ 3 ಗಂಟೆಗಳ ಕಾಲ ಸ್ವಿಚ್ ಆಫ್ ಮಾಡಿದ್ರೆ ಸಾಕಷ್ಟು ವಿದ್ಯುತ್ ಉಳಿಸಬಹುದು. ಕರೆಂಟ್ ಬಿಲ್ ಕೂಡ ಕಡಿಮೆ ಬರುತ್ತದೆ ಅನ್ನೋದು ಹಲವರ ಅಭಿಪ್ರಾಯ.
ಈ ರೀತಿ ಮಾಡುವುದರಿಂದ ವಿದ್ಯುತ್ ಉಳಿತಾಯ ಆಗುತ್ತದೆಯೇ ಅನ್ನೋದನ್ನು ನೋಡೋಣ. ರೆಫ್ರಿಜರೇಟರ್ ಅನ್ನು ವಾರಕ್ಕೊಮ್ಮೆ ಅಥವಾ ಪ್ರತಿದಿನ ಕೆಲವು ಗಂಟೆಗಳ ಕಾಲ ಆಫ್ ಮಾಡಿ ಇಟ್ಟರೆ ವಿದ್ಯುತ್ ಉಳಿತಾಯ ಮಾಡಲು ಸಾಧ್ಯವಿಲ್ಲ. ವಾಸ್ತವವಾಗಿ ರೆಫ್ರಿಜರೇಟರ್ ಅನ್ನು ವರ್ಷಪೂರ್ತಿ ಚಾಲನೆಯಲ್ಲಿಟ್ಟು ಒಂದು ದಿನವೂ ಅದನ್ನು ಆಫ್ ಮಾಡದಿದ್ದರೂ, ಅಥವಾ ದಿನಕ್ಕೊಂದು ಗಂಟೆಯಂತೆ ಆಫ್ ಮಾಡಿದರೂ ವಿದ್ಯುತ್ ಉಳಿಸಲು ಸಾಧ್ಯವಿಲ್ಲ.
ವಾಸ್ತವವಾಗಿ ರೆಫ್ರಿಜರೇಟರ್ ಸ್ವಯಂಚಾಲಿತ ತಂಪಾಗಿಸುವಿಕೆಯನ್ನು ಮಾಡುತ್ತದೆ. ಅದರಲ್ಲಿ ಸ್ಥಾಪಿಸಲಾದ ತಾಪಮಾನ ಸಂವೇದಕವು ಕಡಿಮೆ ವಿದ್ಯುತ್ ತೆಗೆದುಕೊಂಡು ವಸ್ತುಗಳನ್ನು ತಂಪಾಗಿಸುತ್ತದೆ. ಅಗತ್ಯವಿದ್ದಾಗ ಮಾತ್ರ ವಿದ್ಯುತ್ ಅನ್ನು ಎಳೆದುಕೊಳ್ಳುತ್ತದೆ, ನಂತರ ತಂತಾನೇ ಆಫ್ ಮಾಡುತ್ತದೆ.
ಹೀಗಿರುವಾಗ ಪ್ರತಿದಿನ ಕೆಲವು ಗಂಟೆಗಳ ಕಾಲ ರೆಫ್ರಿಜರೇಟರ್ ಅನ್ನು ಆಫ್ ಮಾಡಿದರೆ ಹೆಚ್ಚುವರಿಯಾಗಿ ಕರೆಂಟ್ ಉಳಿತಾಯ ಮಾಡಲು ಸಾಧ್ಯವಿಲ್ಲ. ಬಯಸಿದರೆ ಫ್ರಿಡ್ಜ್ ಕ್ಲೀನ್ ಮಾಡಲು ಕೆಲವು ಗಂಟೆಗಳ ಕಾಲ ಅದನ್ನು ಆಫ್ ಮಾಡಬಹುದು. ರೆಫ್ರಿಜರೇಟರ್ನ ಕೂಲಿಂಗ್ ಅನ್ನು ಕಡಿಮೆ ಮಾಡಿದರೆ ಆಗ ವಿದ್ಯುತ್ ಉಳಿತಾಯ ಮಾಡಬಹುದು.