ಗಿಡ-ಮರಗಳನ್ನು ಬೆಳೆಸುವ ಮೂಲಕ ಪರಿಸರವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಕೆಲವೊಂದು ಗಿಡಗಳಿಗೆ ವಾಸ್ತುಶಾಸ್ತ್ರದಲ್ಲಿಯೂ ಮಾನ್ಯತೆ ಇದೆ. ಅವುಗಳನ್ನು ಪೂಜಿಸಲಾಗುತ್ತದೆ. ದೇವರು ಮತ್ತು ದೇವತೆಗಳು ಮರ-ಗಿಡಗಳಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ.
ಪ್ರತಿಯೊಂದು ಶುಭ ಕಾರ್ಯದಲ್ಲಿ ಮರಗಳು ಮತ್ತು ಸಸ್ಯಗಳನ್ನು ಸಹ ಬಳಸಲಾಗುತ್ತದೆ. ಪೂಜೆಯಲ್ಲಿ ತುಳಸಿ, ಮಾವಿನ ಎಲೆ, ಬಾಳೆ ಎಲೆ ಇತ್ಯಾದಿಗಳನ್ನು ಬಳಸುತ್ತಾರೆ. ಈ ಮರ, ಗಿಡಗಳನ್ನು ಪೂಜಿಸುವುದರಿಂದ ಪುಣ್ಯ ಲಭಿಸುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.
ಹಾಗೆಯೇ ವಿಷ್ಣುವು ಬಾಳೆಮರದಲ್ಲಿ ನೆಲೆಸಿದ್ದಾನೆ ಎಂದು ಪರಿಗಣಿಸಲಾಗಿದೆ. ಬಾಳೆಗಿಡವನ್ನು ಪೂಜಿಸುವುದರಿಂದ ಭಗವಾನ್ ವಿಷ್ಣುವಿನ ವಿಶೇಷ ಅನುಗ್ರಹವನ್ನು ಪಡೆಯಬಹುದು. ಬಾಳೆ ಮರದ ಮೂಲವನ್ನು ಸಹ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಅದಕ್ಕೆ ಸಂಬಂಧಿಸಿದ ಕೆಲವು ಪರಿಹಾರಗಳು ಕೂಡ ಪ್ರಯೋಜನಕಾರಿ.
ಬಾಳೆಬೇರಿನ ಮಹತ್ವ…
ಆರ್ಥಿಕ ಸ್ಥಿತಿ ಹದಗೆಟ್ಟಿದ್ದರೆ ಬಾಳೆ ಬೇರಿಗೆ 11 ಬಾರಿ ಪ್ರದಕ್ಷಿಣೆ ಹಾಕಬೇಕು. ಬೆಲ್ಲ, ಹೆಸರುಬೇಳೆ ಮತ್ತು ಅರಿಶಿನದ ಉಂಡೆಯನ್ನು ಬಾಳೆ ಮರದ ಬೇರಿಗೆ ಅರ್ಪಿಸಬೇಕು. ಹೀಗೆ ಮಾಡುವುದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಲಕ್ಷ್ಮಿದೇವಿಯು ಆಶೀರ್ವಾದ ದೊರೆಯುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಿಂದ ನಕಾರಾತ್ಮಕತೆಯನ್ನು ತೊಡೆದುಹಾಕಲು ಮತ್ತು ಧನಾತ್ಮಕತೆಯನ್ನು ತರಲು ಮನೆಯ ಮುಖ್ಯ ದ್ವಾರದ ಮೇಲೆ ಬಾಳೆ ಬೇರನ್ನು ಕಟ್ಟುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಮನೆಯೊಳಗೆ ನಕಾರಾತ್ಮಕತೆ ಬರುವುದಿಲ್ಲ.
ಮನೆಯಲ್ಲಿ ಸುಖ ಶಾಂತಿ ನೆಲೆಸಲು ಬಾಳೆ ಬೇರಿಗೆ ಅರಿಶಿನ ಬೆರೆಸಿದ ನೀರನ್ನು ಪ್ರತಿನಿತ್ಯ ಅರ್ಪಿಸಬೇಕು. ಬಾಳೆಮರದ ಬೇರನ್ನು ಪೂಜಿಸುವುದರಿಂದ ಮಂಗಳದೋಷ ನಿವಾರಣೆಯಾಗುತ್ತದೆ. ಮದುವೆಯಲ್ಲಿ ಅಡೆತಡೆಗಳು ಇದ್ದಲ್ಲಿ ಗುರುವಾರ ಹಳದಿ ಬಣ್ಣದ ವಸ್ತ್ರಗಳನ್ನು ಧರಿಸಿ ಬಾಳೆಬೇರಿಗೆ ಪೂಜೆ ಸಲ್ಲಿಸುವುದರಿಂದ ವಿವಾಹ ನೆರವೇರುತ್ತದೆ.
ಅದೇ ರೀತಿ ಶ್ರೀಮಂತರಾಗಲು ಬಯಸಿದರೆ ಬಾಳೆ ಮರದ ಬೇರನ್ನು ಕೆಂಪು ಬಟ್ಟೆಯಲ್ಲಿ ಕಟ್ಟಬೇಕು ಮತ್ತು ಅದನ್ನು ಸುರಕ್ಷಿತವಾಗಿಡಬೇಕು. ಈ ರೀತಿ ಮಾಡುವುದರಿಂದ ಬೇಗನೆ ಸಿರಿವಂತರಾಗಬಹುದು.