ಬೇಕಾಗುವ ಸಾಮಾಗ್ರಿಗಳು: ಕಡಲೇ ಹಿಟ್ಟು – 1 ಕಪ್, ಸಕ್ಕರೆ ಪುಡಿ – ಅರ್ಧ ಕಪ್, ತುಪ್ಪ- ಅರ್ಧ ಕಪ್, ಫುಡ್ ಕಲರ್-ಚಿಟಿಕೆ, ಏಲಕ್ಕಿ ಪೌಡರ್ – ಅರ್ಧ ಟೀ ಚಮಚ.
ಮಾಡುವ ವಿಧಾನ: ಮೊದಲಿಗೆ ಒಂದು ಬಾಣಲೆಯಲ್ಲಿ ಅರ್ಧ ಕಪ್ ತುಪ್ಪ ಹಾಕಿ ಅದಕ್ಕೆ ಒಂದು ಕಪ್ ನಷ್ಟು ಕಡಲೇಹಿಟ್ಟು ಹಾಕಿ ಚೆನ್ನಾಗಿ ತಿರುವಿಕೊಳ್ಳಿ. ಮಧ್ಯಮ ಉರಿಯಲ್ಲಿಟ್ಟು ಚೆನ್ನಾಗಿ ತಿರುವಿರಿ. 10 ರಿಂದ 12 ನಿಮಿಷದ ಬಳಿಕ ಫುಡ್ ಕಲರ್ ಹಾಕಿ ಮಿಕ್ಸ್ ಮಾಡಿ.
ನಂತರ ಒಂದು ಸ್ಪೂನ್ ತುಪ್ಪ ಹಾಕಿ ತಿರುವಿಕೊಂಡು ಒಂದು ಪ್ಲೇಟ್ ಗೆ ಎತ್ತಿಡಿ. ಸ್ವಲ್ಪ ತಣ್ಣಗಾದ ಬಳಿಕ ಈ ಮಿಶ್ರಣಕ್ಕೆ ಏಲಕ್ಕಿ ಪುಡಿ ಸೇರಿಸಿಕೊಳ್ಳಿ ನಂತರ ಅರ್ಧ ಕಪ್ ಸಕ್ಕರೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಲಡ್ಡಿನ ತರಹ ಉಂಡೆ ಕಟ್ಟಿದರೆ ಸವಿಯಲು ರುಚಿಯಾದ ಬೆಸನ್ ಲಡ್ಡು ರೆಡಿ.