
ದಾಸವಾಳದ ಎಲೆಯಿಂದ ಹತ್ತು ಹಲವು ಪ್ರಯೋಜನಗಳಿರುವಂತೆ ದಾಸವಾಳದ ಹೂವಿನಿಂದಲೂ ಹಲವು ಆರೋಗ್ಯದ ಲಾಭಗಳಿವೆ. ದಾಸವಾಳದ ಹೂವಿನ ಚಹಾ ತಯಾರಿಸಿ ಕುಡಿಯುವುದರಿಂದ ಯಾವ ಪ್ರಯೋಜನ ಪಡೆಯಬಹುದು ಎಂಬುದನ್ನು ತಿಳಿಯೋಣ.
ನೀರಿಗೆ ನಾಲ್ಕು ದಾಸವಾಳದ ಹೂವುಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಸೋಸಿ. ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಜೇನುತುಪ್ಪ ಸೇರಿಸಿ. ಬಳಿಕ ಪುದೀನಾ ಮತ್ತು ನಿಂಬೆರಸ ಬೆರೆಸಿ ಚಹಾ ತಯಾರಿಸಿ ಕುಡಿಯಿರಿ. ಇದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು ಮಾತ್ರವಲ್ಲ ದೇಹದ ಕೊಲೆಸ್ಟ್ರಾಲ್ ಅಂಶವನ್ನೂ ಕಡಿಮೆ ಮಾಡಬಹುದು.
ಮಹಿಳೆಯರ ತಿಂಗಳ ರಜೆಯ ಸಮಯದ ಹೊಟ್ಟೆ ನೋವು, ಸೆಳೆತ ಹಾಗೂ ಬೆನ್ನು ನೋವಿನ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಜೀರ್ಣ ಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಎಣ್ಣೆ ತ್ವಚೆ ಹೊಂದಿರುವವರು ನಿತ್ಯ ಇದನ್ನು ಕುಡಿದರೆ ನಿಮ್ಮ ತ್ವಚೆಯ ಸಮಸ್ಯೆ ದೂರವಾಗುತ್ತದೆ.
ಗರ್ಭಿಣಿಯರು ಮತ್ತು ಅಲರ್ಜಿ ಸಮಸ್ಯೆ ಹೊಂದಿರುವರು ಈ ಚಹಾವನ್ನು ವೈದ್ಯರ ಒಪ್ಪಿಗೆ ಇಲ್ಲದೆ ಕುಡಿಯುವುದು ಒಳ್ಳೆಯದಲ್ಲ. ಕೆಲವರಿಗೆ ಇದರ ಸೇವನೆಯಿಂದ ತಲೆಸುತ್ತಿದ ಅನುಭವವಾಗಬಹುದು. ಹಾಗಾಗಿ ಕಚೇರಿಗೆ ತೆರಳದ ದಿನಗಳಲ್ಲಿ ರಜಾದಿನಗಳಲ್ಲಿ ಮಾಡಿ ಕುಡಿಯಿರಿ.