
ಕೇಂದ್ರ ಚುನಾವಣಾ ಆಯೋಗದಿಂದ ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಬಳಿಕ ನೀತಿ ಸಂಹಿತೆ ಜಾರಿಗೆ ಬಂದಿದ್ದು, ರಾಜಕೀಯ ಪಕ್ಷಗಳ ಚಿಹ್ನೆ, ಬಾವುಟ, ಸೇರಿದಂತೆ ಅಭ್ಯರ್ಥಿಗೆ ಪೂರಕವಾದ ಸಂಕೇತಗಳನ್ನು ಮರೆ ಮಾಡಲಾಗುತ್ತಿದೆ.
ಹೀಗಾಗಿ ಶಿವಮೊಗ್ಗ ವಿಮಾನ ನಿಲ್ದಾಣದ ವಿನ್ಯಾಸ ಕಮಲದ ಮಾದರಿಯಲ್ಲಿರುವ ಕಾರಣ ಅದನ್ನು ಮರೆಮಾಚಬೇಕೆಂದು ಇತ್ತೀಚೆಗೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಾಯಕರು ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು.
ಇದೀಗ ದಾವಣಗೆರೆ ಗುಂಡಿ ಸರ್ಕಲ್ ನಲ್ಲಿರುವ ಫುಟ್ಬಾಲ್ ಪ್ರತಿಕೃತಿಯನ್ನು ಮುಚ್ಚುವಂತೆ ಕೆಪಿಸಿಸಿ ವಕ್ತಾರ ಡಿ. ಬಸವರಾಜು ಒತ್ತಾಯಿಸಿದ್ದಾರೆ. ಇದಕ್ಕೆ ಕಾರಣವೆಂದರೆ ಗಾಲಿ ಜನಾರ್ದನ ರೆಡ್ಡಿ ಸ್ಥಾಪಿಸಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಚುನಾವಣಾ ಚಿಹ್ನೆ ಫುಟ್ಬಾಲ್. ಹೀಗಾಗಿ ಚುನಾವಣೆ ಮುಗಿಯುವವರೆಗೂ ಇದನ್ನು ಮುಚ್ಚಬೇಕೆಂದು ಬಸವರಾಜು ಆಗ್ರಹಿಸಿದ್ದಾರೆ.