ಬೆಂಗಳೂರು: ಇಂಧನ ದರ ಸತತ 6ನೇ ದಿನವೂ ಏರಿಕೆಯಾಗಿದ್ದು, ಈಗಾಗಲೇ ಪೆಟ್ರೋಲ್ ದರ 100 ರೂಪಾಯಿ ಗಡಿ ದಾಟಿ ಹಲವು ದಿನಗಳು ಕಳೆದಿವೆ.
ಇದೀಗ ಡೀಸೆಲ್ ದರ ಕೂಡ 100 ರೂಪಾಯಿ ದಾಟಿರುವುದು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಚಳಿಗಾಲದಲ್ಲಿ ʼಹನಿಮೂನ್ʼ ಗೆ ಇದು ಬೆಸ್ಟ್
ರಾಜ್ಯದಲ್ಲಿಯೂ ಪೆಟ್ರೋಲ್-ಡೀಸೆಲ್ ದರ ಗಗನಕ್ಕೇರಿದ್ದು, ದಾವಣಗೆರೆ ಜಿಲ್ಲೆಯಲ್ಲಿ ಡೀಸೆಲ್ ದರ ಕಂಡು ಜನಸಾಮಾನ್ಯರು ಕಂಗಾಲಾಗಿದ್ದಾರೆ. ಲೀಟರ್ ಡೀಸೆಲ್ 100 ರೂಪಾಯಿ ದಾಟಿದೆ. ಡೀಸೆಲ್ ದರ ಪ್ರತಿ ಲಿಟರ್ ಗೆ 37 ಪೈಸೆ ಹೆಚ್ಚಳವಾಗಿದ್ದು ಪ್ರತಿ ಲೀಟರ್ ಡೀಸೆಲ್ ದರ 100.03 ರೂಪಾಯಿ ಆಗಿದೆ. ಪೆಟ್ರೋಲ್ ದರ ಲೀಟರ್ ಗೆ 109.54 ರೂಪಾಯಿ ಆಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 107.77 ರೂಪಾಯಿ ಆಗಿದ್ದು, ಡೀಸೆಲ್ ದರ 98.52 ರೂಪಾಯಿ ನಿಗದಿಯಾಗಿದೆ. ದೇಶಾದ್ಯಂತ ಹೆಚ್ಚುತ್ತಿರುವ ತೈಲ ದರ ಏರಿಕೆಯಿಂದ ಕಂಗಾಲಾಗಿರುವ ಗ್ರಾಹಕರು ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.