ದಾಳಿಂಬೆ ಜ್ಯೂಸ್ ಕುಡಿಯೋದ್ರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ. ಕ್ಯಾನ್ಸರ್, ಹೃದಯ ರಕ್ತನಾಳದ ಖಾಯಿಲೆಗಳಿಂದಲೂ ರಕ್ಷಣೆ ಕೊಡುತ್ತೆ.
ಸಂಶೋಧನೆಯ ಪ್ರಕಾರ ದಾಳಿಂಬೆ ಜ್ಯೂಸ್ ಹೃದಯ ರಕ್ತನಾಳಗಳನ್ನು ಶುದ್ಧಗೊಳಿಸಿ ಖಾಯಿಲೆಗಳು ಬರದಂತೆ ನೋಡಿಕೊಳ್ಳುತ್ತದೆ. ಹೃದಯಾಘಾತಕ್ಕೆ ಮುಖ್ಯ ಕಾರಣವಾಗಿರೋ ಅಪಧಮನಿ ಹಾಗೂ ಅಬಿಧಮನಿ ಮುಚ್ಚಿಹೋಗುವ ಅಪಾಯವನ್ನೂ ಕೂಡ ದಾಳಿಂಬೆ ತಡೆಯುತ್ತದೆ.
ಅಲ್ಲದೇ ದಾಳಿಂಬೆ ಜ್ಯೂಸ್ ಕಡಿಮೆ ರಕ್ತದೊತ್ತಡ ತಡೆಯುತ್ತೆ, ಕೊಲೆಸ್ಟ್ರಾಲ್ ಲೆವಲ್ ಉತ್ತಮಗೊಳಿಸುತ್ತೆ. ದೇಹದಲ್ಲಿ ಗಡ್ಡೆಗಳಾಗುವುದನ್ನು ತಡೆಯುತ್ತದೆ. ಹೃದಯ ಸಂಬಂಧಿ ಖಾಯಿಲೆಗಳ ಸಾಧ್ಯತೆಯನ್ನೂ ಸಹ ಕಡಿಮೆ ಮಾಡುತ್ತೆ. ಅಲ್ಲದೇ ದಾಳಿಂಬೆಯಲ್ಲಿರುವ ಗುಣಗಳು ಕ್ಯಾನ್ಸರ್ ಅನ್ನು ತಡೆಗಟ್ಟುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ.
ಇಷ್ಟೆಲ್ಲ ಉಪಯೋಗಗಳಿರುವಾಗ ದಿನವೂ ಒಂದು ಗ್ಲಾಸ್ ದಾಳಿಂಬೆ ಜ್ಯೂಸ್ ಕುಡಿಯೋದ್ರಲ್ಲಿ ತಪ್ಪೇನಿದೆ ಹೇಳಿ…?