alex Certify ದಾಖಲೆ ಬರೆದ ಕರ್ನಾಟಕ…! 100% ವ್ಯಾಕ್ಸಿನ್ ಪಡೆದ ರಾಜ್ಯದ ಮಧ್ಯ ವಯಸ್ಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾಖಲೆ ಬರೆದ ಕರ್ನಾಟಕ…! 100% ವ್ಯಾಕ್ಸಿನ್ ಪಡೆದ ರಾಜ್ಯದ ಮಧ್ಯ ವಯಸ್ಕರು

ಒಮಿಕ್ರಾನ್ ನಿಂದ ಎಚ್ಚೆತ್ತುಕೊಂಡ ಜನರು ಲಸಿಕೆ ಪಡೆಯಲು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಇವ್ರಲ್ಲಿ ಮುಂದಿರುವ ಮಧ್ಯ ವಯಸ್ಕರು ತೀವ್ರಗೊಳಿಸಿರುವ ವ್ಯಾಕ್ಸಿನೇಷನ್ ಅಭಿಯಾನಕ್ಕೆ ಭರ್ಜರಿ ರೆಸ್ಪಾನ್ಸ್ ನೀಡಿದ್ದಾರೆ. ಈ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ಮತ್ತೊಂದು ಸಾಧನೆಯ ಹಂತ ತಲುಪಿದೆ. ರಾಜ್ಯದ 45 ರಿಂದ 59 ವರ್ಷದ ಮಧ್ಯ ವಯಸ್ಕರು ನೂರಕ್ಕೆ ನೂರರಷ್ಟು ಮೊದಲ ಡೋಸ್ ಲಸಿಕೆ ಪಡೆದು ದಾಖಲೆ ಬರೆದಿದ್ದಾರೆ.

ಒಮಿಕ್ರಾನ್ ಆಗಮನದ ನಡುವೆ ಈ ಬೆಳವಣಿಗೆ ಸಣ್ಣ‌ನೆಮ್ಮದಿ ನೀಡಿದೆ. ರಾಜ್ಯದಲ್ಲಿ ಒಂದು ಹಂತದ ವಯಸ್ಕರಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಮೊದಲ ಡೋಸ್ ಲಸಿಕೆ ಹಂಚಿಕೆಯಾಗಿದೆ. ಅಲ್ಲದೇ ಎರಡನೇ ಡೋಸ್ ಲಸಿಕೆ ಪಡೆಯುವಲ್ಲೂ ಇದೇ ವಯೋಮಿತಿಯ ಜನರೇ ಮುಂಚೂಣಿಯಲ್ಲಿದ್ದಾರೆ. ಲಸಿಕೆ ಪಡೆಯಲು ರಾಜ್ಯದಲ್ಲಿ 45 ರಿಂದ 59 ವರ್ಷದ 1 ಕೋಟಿ 20 ಲಕ್ಷ ಜನ ಅರ್ಹರಿದ್ದಾರೆ. ಈ ಪೈಕಿ ಅಷ್ಟೂ ಮಂದಿ ಎಂದರೆ ಶೇ.100ರಷ್ಟು ಮಂದಿಗೂ ಲಸಿಕೆ ಹಂಚಿಕೆ ಮಾಡಲಾಗಿದೆ.

ದೆಹಲಿ: 1400 ಇವಿ ಚಾರ್ಜಿಂಗ್ ಪಾಯಿಂಟ್‌ಗಳ ಅಳವಡಿಸಿದ ಟಾಟಾ ಪವರ್‌

ಇದುವರೆಗೂ ಕೂಡ ದೇಶದ ಯಾವುದೇ ರಾಜ್ಯದಲ್ಲಿ ಈ ವಯೋಮಿತಿಯ ಜನರಿಗೆ ನೂರಕ್ಕೆ ನೂರರಷ್ಟು ಪ್ರಮಾಣದಲ್ಲಿ ಮೊದಲ ಡೋಸ್ ಲಸಿಕೆ ಹಂಚಿಕೆ ಮಾಡಲಾಗಿಲ್ಲ. ಇದೇ ಮೊದಲ ಬಾರಿಗೆ ಕರ್ನಾಟಕ ಆ ಸಾಧನೆ ಮಾಡಿ, ಕೊರೋನಾ ಹೋರಾಟದಲ್ಲಿ ಮುಂಚೂಣಿಯಲ್ಲಿದೆ. ಅಲ್ಲದೆ ಎರಡನೇ ಡೋಸ್ ಪಡೆಯುವಲ್ಲಿ ಇವರೆ ಮುಂದಿದ್ದು ಈಗಾಗ್ಲೆ 81% ರಷ್ಟು ಪ್ರಮಾಣದಲ್ಲಿ ಸೆಕೆಂಡ್ ಡೋಸ್ ಪಡೆದಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...