alex Certify ದಾಖಲೆಯ ತಾಪಮಾನ: ಪೂರ್ವ ಅಂಟಾರ್ಕ್ಟಿಕಾದಲ್ಲಿ ಸಾಮಾನ್ಯಕ್ಕಿಂತ 30 ಡಿಗ್ರಿಗಳಷ್ಟು ಹೆಚ್ಚಿನ ತಾಪಮಾನ ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾಖಲೆಯ ತಾಪಮಾನ: ಪೂರ್ವ ಅಂಟಾರ್ಕ್ಟಿಕಾದಲ್ಲಿ ಸಾಮಾನ್ಯಕ್ಕಿಂತ 30 ಡಿಗ್ರಿಗಳಷ್ಟು ಹೆಚ್ಚಿನ ತಾಪಮಾನ ದಾಖಲು

ಪ್ಯಾರಿಸ್: ಪೂರ್ವ ಅಂಟಾರ್ಕ್ಟಿಕಾದಲ್ಲಿ ಈ ವಾರ ಹೆಚ್ಚಿನ ತಾಪಮಾನ ದಾಖಲಾಗಿದೆ. ಇದು ಸಾಮಾನ್ಯಕ್ಕಿಂತ 30 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಎಂದು ತಜ್ಞರು ಹೇಳಿದ್ದಾರೆ.

3,000 ಮೀಟರ್ (9,800 ಅಡಿ) ಎತ್ತರದಲ್ಲಿರುವ ಅಂಟಾರ್ಕ್ಟಿಕ್‌ನ ಡೋಮ್ ಸಿ ನಲ್ಲಿರುವ ಕಾನ್ಕಾರ್ಡಿಯಾ ಸಂಶೋಧನಾ ನೆಲೆಯು ಶುಕ್ರವಾರ ದಾಖಲೆಯ -11.5 ಡಿಗ್ರಿ ಸೆಲ್ಸಿಯಸ್ ದಾಖಲಿಸಿದೆ ಎಂದು ಫ್ರಾನ್ಸ್-ಮೆಟಿಯೊದ ಹವಾಮಾನಶಾಸ್ತ್ರಜ್ಞ ಎಟಿಯೆನ್ನೆ ಕಪಿಕಿಯಾನ್ ತಿಳಿಸಿದ್ದಾರೆ.

ಸಾಮಾನ್ಯವಾಗಿ, ದಕ್ಷಿಣ ಬೇಸಿಗೆಯ ಅಂತ್ಯದೊಂದಿಗೆ ತಾಪಮಾನವು ಕುಸಿಯುತ್ತದೆ. ಆದರೆ, ಅಂಟಾರ್ಕ್ಟಿಕಾದ ಡುಮಾಂಟ್ ಡಿ’ಉರ್ವಿಲ್ಲೆ ನಲ್ಲಿ ಮಾರ್ಚ್‌ ತಿಂಗಳಲ್ಲಿ 4.9 ಸೆಲ್ಸಿಯಸ್ ನೊಂದಿಗೆ ದಾಖಲೆಯ ತಾಪಮಾನವನ್ನು ದಾಖಲಿಸಿದೆ.

ಫ್ರಾನ್ಸ್ ಮೆಟಿಯೊದ ಗೇಟನ್ ಹೇಮ್ಸ್ ಅವರು ಈ ರೀತಿಯ ಹವಾಮಾನವನ್ನು ಐತಿಹಾಸಿಕ ಘಟನೆ ಎಂದು ವಿವರಿಸಿದ್ದಾರೆ.

ಜಾಗತಿಕ ತಾಪಮಾನ ಏರಿಕೆಯಿಂದಾಗಿ ಅಂಟಾರ್ಟಿಕಾದಲ್ಲಿನ ಹಿಮ ಕರಗುತ್ತಿದೆ ಎಂಬಂತಹ ಆಘಾತಕಾರಿ ವಿಚಾರಗಳು ಬೆಳಕಿಗೆ ಬಂದಿದ್ದವು. 1979 ರ ನಂತರ ಮೊದಲ ಬಾರಿಗೆ ಫೆಬ್ರವರಿ ಅಂತ್ಯದಲ್ಲಿ ಅಂಟಾರ್ಕ್ಟಿಕಾದಲ್ಲಿ ಸಮುದ್ರದ ಮಂಜುಗಡ್ಡೆಯು ಎರಡು ಮಿಲಿಯನ್ ಚದರ ಕಿ.ಮೀ (ಸುಮಾರು 772,204 ಚದರ ಮೈಲಿಗಳು) ಗಿಂತ ಕಡಿಮೆಯಾಗಿದೆ ಎಂದು ಅಮೆರಿಕಾದ ಅಧ್ಯಯನ ವರದಿಯೊಂದು ಮಾಹಿತಿ ನೀಡಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...