alex Certify ದಾಂಪತ್ಯ ಹಾಳಾಗಲು ಕಾರಣವಾಗುತ್ತೆ ಈ ವಿಷ್ಯಗಳಲ್ಲಿ ಸಂಗಾತಿ ಮಾಡುವ ನಿರ್ಲಕ್ಷ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾಂಪತ್ಯ ಹಾಳಾಗಲು ಕಾರಣವಾಗುತ್ತೆ ಈ ವಿಷ್ಯಗಳಲ್ಲಿ ಸಂಗಾತಿ ಮಾಡುವ ನಿರ್ಲಕ್ಷ್ಯ

ಯಾವುದೇ ಸಂಬಂಧ ಇರಲಿ, ಅಲ್ಲಿ ಹೊಂದಾಣಿಕೆ ಮುಖ್ಯ. ಆದರೆ ಕೆಲವೊಂದು ವಿಷಯಗಳು ಪ್ರೀತಿಯ ಮುಂದೆ ನಿರ್ಲಕ್ಷ್ಯಿಸಿಬಿಡ್ತೆವೆ. ಆದ್ರೆ ದಾಂಪತ್ಯದಲ್ಲಿ ಕೆಲ ವಿಷ್ಯಗಳನ್ನು ಎಂದೂ ನಿರ್ಲಕ್ಷ್ಯ ಮಾಡಬಾರದು.

ಸಂಬಂಧ ಹೊಸದಾಗಿರುವಾಗ ಎಲ್ಲವೂ ಮಜವಾಗಿರುತ್ತದೆ. ಸಂಗಾತಿಯ ತಮಾಷೆ, ಕೋಪ ಎಲ್ಲವೂ ಇಷ್ಟವಾಗುತ್ತಿರುತ್ತೆ. ಆದರೆ ದಿನಕಳೆದಂತೆ ಅದೇ ಕಿರಿಕಿರಿ ಉಂಟು ಮಾಡಲು ಶುರು ಮಾಡುತ್ತೆ. ಇದು ದಾಂಪತ್ಯ ಬಿರುಕಿಗೆ ಕಾರಣವಾಗಬಹುದು. ಇಬ್ಬರ ವಿಚ್ಛೇದನಕ್ಕೂ ಕಾರಣವಾಗಬಹುದು. ಹಾಗಾಗಿ ಎಂದೂ ಭಾವನೆಗಳಿಗೆ ಧಕ್ಕೆ ತರುವ ನಿಂದನೆ ಮಾಡಬೇಡಿ. ಪ್ರೀತಿಯ ಜೊತೆಗೆ ನಂಬಿಕೆಯೂ ಮುಖ್ಯ ಎಂಬುದು ತಿಳಿದಿರಲಿ. ಪ್ರೀತಿ ಎಲ್ಲಿರುತ್ತದೆಯೋ ಅಲ್ಲಿ ನಂಬಿಕೆಯೂ ಮುಖ್ಯ. ಪ್ರತಿ ಮಾತಿಗೂ ಸಂಗಾತಿ ಸಂದೇಹ ವ್ಯಕ್ತಪಡಿಸ್ತಿದ್ದರೆ ಅವರು ಪ್ರೀತಿಗೆ ಅರ್ಹರಲ್ಲ. ಈ ಸಂಬಂಧ ತುಂಬಾ ದಿನ ನಡೆಯುವುದಿಲ್ಲ.

ಪ್ರೀತಿಸುವ ವ್ಯಕ್ತಿ ನಿಮ್ಮನ್ನ ಗೌರವದಿಂದ ನೋಡಬೇಕು. ಮಾತು ಮಾತಿಗೆ ನಿಂದನೆ ಮಾಡಬಾರದು. ಹಾಗೂ ತಾನೇ ಶ್ರೇಷ್ಟ ಅಂತ ಸ್ವಾರ್ಥ ಇರಬಾರದು. ಇದು ಸಂಬಂಧ ಹಾಳು ಮಾಡುತ್ತದೆ. ಮಾಡುವ ತಪ್ಪುಗಳನ್ನ ಒಪ್ಪಿಕೊಳ್ಳು ಮನೋಭಾವ ಇರಬೇಕು. ಕೆಲವರು  ಏನೇ ಮಾಡಿದರೂ ಅದು ಸರಿಯಿದೆ ಎಂದು ವಾದಿಸುತ್ತಾರೆ. ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಅಂತವರ ಜೊತೆ ಜೀವನ ಕಷ್ಟ.

ಭಾವನೇಯೇ ಇಲ್ಲದವರ ಜೊತೆ ಜೀವನ ಕಳೆಯುವುದು ಕಷ್ಟ. ಕೆಲವರಿಗೆ ಭಾವನೆಗಳನ್ನ ವ್ಯಕ್ತಪಡಿಸುವುದಕ್ಕೆ ಬರುವುದಿಲ್ಲ. ಇಂಥವರು ನಿಮ್ಮ ಭಾವನೆಗಳನ್ನ ಅರ್ಥ ಮಾಡಿಕೊಳ್ಳುವುದಿಲ್ಲ. ಇಂಥವರು ಹೆಚ್ಚು ಮಾತನಾಡುವುದೂ ಇಲ್ಲ. ಇಂತಹ ಮನೋಭಾವವುಳ್ಳವರ ಜೊತೆ ಜೀವನ ಸಾಗಿಸೋದು ಸುಲಭದ ಮಾತಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...