ದಂಪತಿ ನಡುವೆ ಸಣ್ಣಪುಟ್ಟ ಸಮಸ್ಯೆ ಸಾಮಾನ್ಯ. ಹಿಂದಿನ ಕಾಲದಲ್ಲಿ ಒಟ್ಟು ಕುಟುಂಬ ಪದ್ಧತಿ ಜಾರಿಯಲ್ಲಿತ್ತು. ದಂಪತಿ ಜಗಳ ಬೆಡ್ ರೂಮಿನಲ್ಲಿಯೇ ಮುಗಿಯುತ್ತಿತ್ತು. ಈಗ ಸಣ್ಣ ಕುಟುಂಬ. ಸಹನಶಕ್ತಿ ಕಡಿಮೆಯಾಗ್ತಿದೆ. ಜಗಳ ಬೆಡ್ ರೂಮ್ ನಿಂದ ಅಡುಗೆ ಮನೆಯವರೆಗೂ ಬಂದಿದೆ. ಇದಕ್ಕೆ ವಾಸ್ತು ದೋಷವೂ ಕಾರಣವಾಗುತ್ತದೆ. ವಾಸ್ತು ದೋಷ ಪರಿಹಾರಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ ಎಂಬ ನಂಬಿಕೆಯಿದೆ. ಆದ್ರೆ ಇದು ತಪ್ಪು. ಖರ್ಚಿಲ್ಲದೆ ವಾಸ್ತು ದೋಷಗಳನ್ನು ಬಗೆಹರಿಸಿಕೊಂಡು ದಾಂಪತ್ಯವನ್ನು ಗಟ್ಟಿಗೊಳಿಸಬಹುದು.
ಬೆಳಿಗ್ಗೆ ಎದ್ದ ತಕ್ಷಣ ಕಿಟಕಿ ಬಾಗಿಲುಗಳನ್ನು ತೆರೆಯಿರಿ. ವಾಸ್ತು ಪ್ರಕಾರ ಬೆಳಿಗ್ಗೆ ಕಿಟಕಿ ಬಾಗಿಲು ತೆರೆಯುವುದ್ರಿಂದ ಸಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುತ್ತದೆ.
ಬೆಳಿಗ್ಗೆ 15 ನಿಮಿಷ ಸೂರ್ಯನ ಕಿರಣದ ಕೆಳಗೆ ಕುಳಿತು ಧ್ಯಾನ ಮಾಡಿ.
ಸೂರ್ಯಾಸ್ತದ ನಂತ್ರ ಪೂರ್ವ-ದಕ್ಷಿಣ ಭಾಗದಲ್ಲಿ ಕೆಂಪು ಮೇಣದ ಬತ್ತಿಯನ್ನು ಹಚ್ಚಿ ವಾತಾವರಣವನ್ನು ಆಹ್ಲಾದಗೊಳಿಸಿ.
ಮನೆಯ ಪೂರ್ವ-ಉತ್ತರ ದಿಕ್ಕಿನಲ್ಲಿ ಪೊರಕೆಯನ್ನಿಡಬೇಡಿ.
ಮನೆಯಲ್ಲಿ ಒಡೆದ ಕನ್ನಡಿ, ಗ್ಲಾಸು, ಗಡಿಯಾರವನ್ನಿಡಬೇಡಿ.
ಮನೆಯ ವಾಯುವ್ಯ ಮೂಲೆಯಲ್ಲಿ ಬಣ್ಣ ಬಣ್ಣದ ಮೀನುಗಳಿರುವ ಅಕ್ವೇರಿಯಂ ಇಡಿ.
ಮನೆಯ ಗೋಡೆ ಬಿರುಕು ಬಿಡದಂತೆ ನೋಡಿಕೊಳ್ಳಿ.