ಮನೆಯಲ್ಲಿರುವ ಕನ್ನಡಿ ವಾಸ್ತು ಶಾಸ್ತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕನ್ನಡಿ ಸರಿಯಾದ ಸ್ಥಳದಲ್ಲಿ ಇಲ್ಲದೆ ಹೋದಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಲು ಕಾರಣವಾಗುತ್ತದೆ. ಪತಿ-ಪತ್ನಿ ಮಧ್ಯೆ ಕಲಹಕ್ಕೆ ಇದು ಕಾರಣವಾಗುತ್ತದೆ. ಹಾಗಾಗಿ ಮನೆಯ ಯಾವ ದಿಕ್ಕಿನಲ್ಲಿ ಕನ್ನಡಿ ಇರಬೇಕೆಂಬುದನ್ನು ಮೊದಲು ತಿಳಿದುಕೊಳ್ಳಬೇಕು.
ಕನ್ನಡಿಯನ್ನು ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ಧಾರ್ಮಿಕ ವಾದ-ವಿವಾದಗಳಿಗೆ ಇದು ಕಾರಣವಾಗುತ್ತದೆ. ಸಂಬಂಧದಲ್ಲಿ ಗಲಾಟೆಗೆ ಕಾರಣವಾಗುತ್ತದೆ.
ಕನ್ನಡಿಯನ್ನು ಉತ್ತರ-ಪಶ್ಚಿಮ ದಿಕ್ಕಿನಲ್ಲೂ ಇಡಬಾರದು. ಇದು ಕಾನೂನು ವಿವಾದವುಂಟು ಮಾಡುತ್ತದೆ. ಕಾರಣವಿಲ್ಲದೆ ಶತ್ರುಗಳು ಹುಟ್ಟಿಕೊಳ್ತಾರೆ. ಅನಾವಶ್ಯಕ ಖರ್ಚು ಹೆಚ್ಚಾಗುತ್ತದೆ.
ಮಲಗುವ ವೇಳೆ ಕನ್ನಡಿ ಕಣ್ಣಿಗೆ ಬೀಳುವಂತೆ ಇರಬಾರದು. ಇದು ದಾಂಪತ್ಯ ಜೀವನಕ್ಕೆ ಅಶುಭ. ಇದು ದಾಂಪತ್ಯದ ಸುಖವನ್ನು ಹಾಳು ಮಾಡುತ್ತದೆ. ಮಲಗುವ ಕೋಣೆಯಲ್ಲಿ ಕನ್ನಡಿಯಿದ್ರೆ ಅದು ನಿಮ್ಮ ಕಣ್ಣಿಗೆ ಬೀಳದಂತೆ ಇಡಿ. ಕನ್ನಡಿಯನ್ನು ಮುಚ್ಚಿ ಮಲಗಬಹುದು.
ಮನೆಯ ಮುಖ್ಯದ್ವಾರದಲ್ಲಿ ಕನ್ನಡಿ ಇಡಬೇಡಿ. ಇದು ಕುಟುಂಬದ ಕಲಹವನ್ನು ಹೆಚ್ಚಿಸುತ್ತದೆ. ಕುಟುಂಬದ ಸದಸ್ಯರು ದಿನವನ್ನು ಓಡಾಡುತ್ತ ಕಳೆಯುವಂತೆ ಮಾಡುತ್ತದೆ. ಶಾರೀರಿಕ ಸಮಸ್ಯೆಗೆ ಕಾರಣವಾಗುತ್ತದೆ.
ಕನ್ನಡಿ ಯಾವುದೋ ಒಂದು ಜಾಗದಲ್ಲಿ ಒಡೆದಿದ್ದರೆ ಆ ಕನ್ನಡಿಯನ್ನು ತಕ್ಷಣ ತೆಗೆದು ಹಾಕಿ. ಇದು ನಕಾರಾತ್ಮಕ ಶಕ್ತಿ ಹೆಚ್ಚಳಕ್ಕೆ ಕಾರಣವಾಗುತ್ತದೆ.