ಕುಟುಂಬದಲ್ಲಿ ಸಂತೋಷ ನೆಲೆಸಿರಬೇಕು, ನೆಮ್ಮದಿ ಜೀವನ ನಮ್ಮದಾಗಬೇಕೆಂದು ಪ್ರತಿ ದಿನ ಪ್ರಯತ್ನಪಡ್ತೇವೆ. ಆದ್ರೆ ಎಷ್ಟೇ ಪ್ರಯತ್ನಿಸಿದ್ರೂ ಅನೇಕ ಬಾರಿ ವೈಮನಸ್ಸು ಮನದಲ್ಲಿ ಮನೆ ಮಾಡಿರುತ್ತದೆ. ಸಣ್ಣಪುಟ್ಟ ವಿಷ್ಯಕ್ಕೆ ದಂಪತಿ ಮಧ್ಯೆ ಗಲಾಟೆ ನಡೆಯುತ್ತಿರುತ್ತದೆ. ಜಗಳ, ಕಿರಿಕಿರಿಗೆ ಕಾರಣ ವಾಸ್ತು ದೋಷವೂ ಒಂದು ಕಾರಣವಾಗಿರಬಹುದು. ವಾಸ್ತು ಶಾಸ್ತ್ರದಲ್ಲಿ ಅದಕ್ಕೆ ಪರಿಹಾರ ಹೇಳಲಾಗಿದೆ.
ಪ್ರತಿ ದಿನ ಮನೆಯಲ್ಲಿ ಜಗಳವಾಗ್ತಿದ್ದರೆ ಲಕ್ಷ್ಮಿ ಮನೆಯಲ್ಲಿ ನೆಲೆಸೋದಿಲ್ಲ. ವ್ಯಾಪಾರದಲ್ಲಿ ಹಿನ್ನಡೆಯಾಗುತ್ತದೆ. ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸಬೇಕೆಂದ್ರೆ, ದಾಂಪತ್ಯದಲ್ಲಿ ಜಗಳ ಕಡಿಮೆಯಾಗಬೇಕೆಂದ್ರೆ ಮನೆಯ ಮಹಿಳೆಯರು ಸೂರ್ಯೋದಯಕ್ಕೆ ಮೊದಲೇ ಮನೆಯನ್ನು ಗುಡಿಸಿ ಎಲ್ಲಾ ಕಸವನ್ನು ಮನೆಯಿಂದ ಹೊರಹಾಕಬೇಕು.
ಮನೆಯಲ್ಲಿ ನೆಮ್ಮದಿ ಬೇಕು ಎನ್ನುವವರು ಮನೆಯ ಈಶಾನ್ಯ ದಿಕ್ಕಿನಲ್ಲಿ ಶೌಚಾಲಯವನ್ನು ಇಡಬಾರದು. ಹಾಗೆ ಆ ಸ್ಥಳವನ್ನು ಸದಾ ಸ್ವಚ್ಛವಾಗಿಡಬೇಕು.
ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸಲು ನೀವು ಆಕಳ ಸಗಣಿಯಿಂದ ಹಣತೆ ತಯಾರಿಸಿ ಅದರಲ್ಲಿ ದೀಪ ಹಚ್ಚಬೇಕು. ಸಾಧ್ಯವಾದ್ರೆ ಅದಕ್ಕೆ ಬೆಲ್ಲವನ್ನು ಹಾಕಿ, ಮನೆಯ ಮುಖ್ಯ ದ್ವಾರದಲ್ಲಿಟ್ಟರೆ ಮತ್ತಷ್ಟು ಉತ್ತಮ ಫಲವನ್ನು ನೀವು ಪಡೆಯಬಹುದು.
ಮಂಗಳವಾರ ಹನುಮಂತನಿಗೆ ಪಂಚಮುಖಿ ದೀಪ ಮತ್ತು ಅಷ್ಟಗಂಧವನ್ನು ಅರ್ಪಿಸಿದ್ರೆ ಮನೆಯಿಂದ ನಕಾರಾತ್ಮಕ ಶಕ್ತಿ ಓಡಿ ಹೋಗುತ್ತದೆ. ಮನೆಯೊಳಗೆ ಧನಾತ್ಮಕ ಶಕ್ತಿ ನೆಲೆಸುತ್ತದೆ. ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆ ನಿಲ್ಲುತ್ತದೆ.
ಮನೆಯಲ್ಲಿ ಪದೇ ಪದೇ ಜಗಳವಾಗ್ತಿದೆ ಎಂದಾದ್ರೆ ನೀವು ಸತ್ಯನಾರಾಯಣ ದೇವರ ಕಥೆಯನ್ನು ಕೇಳಬೇಕು. ಇದ್ರಿಂದ ಮನೆಯಲ್ಲಿ ಶಾಂತ ವಾತಾವರಣ ನೆಲೆ ನಿಲ್ಲುತ್ತದೆ. ಪ್ರೀತಿ ಮನೆಯನ್ನು ಆವರಿಸುತ್ತದೆ.