ಪತಿ-ಪತ್ನಿ ಮಧ್ಯೆ ಹೊಂದಾಣಿಕೆ ಇಲ್ಲವಾದ್ರೆ ದಾಂಪತ್ಯ ರುಚಿ ಕಳೆದುಕೊಳ್ಳುತ್ತದೆ. ನಿಧಾನವಾಗಿ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹ ದೋಷಗಳಿಂದಲೂ ದಂಪತಿ ಬೇರೆಯಾಗ್ತಾರೆ. ಒಬ್ಬರ ಜಾತಕದಲ್ಲಿ ಗ್ರಹ ದೋಷವಿದ್ರೂ ಗಲಾಟೆ, ಜಗಳ ನಡೆಯುತ್ತದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಗ್ರಹವನ್ನು ವಿವಾಹದ ಗ್ರಹವೆಂದು ಪರಿಗಣಿಸಲಾಗಿದೆ. ಜಾತಕದ ಏಳನೇ ಮನೆ ವಿವಾಹದ ಸ್ಥಾನವಾಗಿದೆ. ಈ ಮನೆಯಲ್ಲಿ ಸೂರ್ಯ, ಗುರು, ರಾಹು, ಮಂಗಳ, ಶನಿ ಪ್ರವೇಶ ಮಾಡಿದ್ದು ಅಥವಾ ಅವ್ರ ದೃಷ್ಟಿ ಬಿದ್ದಿದ್ದರೆ ವಿವಾಹದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಜಾತಕದ ಏಳನೇ ಸ್ಥಾನದಲ್ಲಿ ಸೂರ್ಯನ ಪ್ರವೇಶವಾದ್ರೆ ಇದು ವಿಚ್ಛೇದನಕ್ಕೆ ಕಾರಣವಾಗುತ್ತದೆ.
ದಾಂಪತ್ಯ ಗಟ್ಟಿಯಾಗಿರಬೇಕೆಂದ್ರೆ ದಂಪತಿ ಪ್ರತಿ ದಿನ ಶಿವನ ಜೊತೆ ತಾಯಿ ಪಾರ್ವತಿಯ ಪೂಜೆ ಮಾಡಬೇಕು.
ಪ್ರತಿ ದಿನ ಬೆಳಿಗ್ಗೆ ದೇವರ ಪೂಜೆ ನಂತ್ರ ಪತ್ನಿ ಹಣೆಗೆ ಪತಿ ಸಿಂಧೂರವಿಡಬೇಕು. ಇದ್ರಿಂದ ಪ್ರೀತಿ ಹೆಚ್ಚಾಗುತ್ತದೆ.
ಮಹಿಳೆಯಾದವಳು ಪ್ರತಿ ದಿನ ಪಾರ್ವತಿಗೆ ಕುಂಕುಮ ಅರ್ಪಿಸಿ ಪೂಜೆ ಮಾಡಬೇಕು. ನಂತ್ರ ಕುಂಕುಮವನ್ನು ಹಣೆಗೆ ಹಚ್ಚಿಕೊಳ್ಳಬೇಕು.
ಪ್ರತಿ ಶುಕ್ರವಾರ ಪತಿ, ಪತ್ನಿಗೆ ಯಾವುದಾದ್ರೂ ಉಡುಗೊರೆ ನೀಡಬೇಕು.
ಜಾತಕದಲ್ಲಿ ಯಾವ ಗ್ರಹ ದುರ್ಬಲವಾಗಿದೆಯೋ ಅದ್ರ ಬಲವರ್ಧನೆಗೆ ಕೆಲಸ ಮಾಡಬೇಕು.
ಪ್ರತಿ ಗುರುವಾರ ಬಾಳೆ ಗಿಡಕ್ಕೆ ಪೂಜೆ ಮಾಡಬೇಕು.
ಶಿವಲಿಂಗಕ್ಕೆ ಅರಿಶಿನವನ್ನು ಅರ್ಪಿಸಿ ವೈವಾಹಿಕ ಜೀವನದಲ್ಲಿ ಶಾಂತಿ ನೆಲೆಸಲು ಪ್ರಾರ್ಥಿಸಿ.