ಸಂತೋಷವಾಗಿರಲು ಒಟ್ಟಿಗೆ ವಾಸಿಸುವ ವಿಷಯ ಈಗ ಹಳೆಯದು. ಅಧ್ಯಯನದ ಪ್ರಕಾರ, ಕೆಲಸಕ್ಕೆ ಸಂಬಂಧಿಸಿದಂತೆ ಪರಸ್ಪರ ದೂರವಿರುವ ದಂಪತಿ, ಪರಸ್ಪರರನ್ನು ಹೆಚ್ಚು ಪ್ರೀತಿಸುತ್ತಾರಂತೆ. ಅವರ ನಡುವೆ ಯಾವಾಗಲೂ ನಿಕಟ ಸಂಬಂಧವಿರುತ್ತದೆ. ಹಲವಾರು ದಿನಗಳ ನಂತರ ಪರಸ್ಪರ ಭೇಟಿಯಾದಾಗ ಅವರು ಇದನ್ನು ಅರಿತುಕೊಳ್ಳುತ್ತಾರಂತೆ.
ಈ ದೂರವು ಐದು ದಿನಗಳಿಗಿಂತ ಹೆಚ್ಚು ಇರಬಾರದು. ಸಮೀಕ್ಷೆಯೊಂದರಲ್ಲಿ ಭಾಗವಹಿಸಿದ್ದ ಪ್ರತಿ ಹತ್ತು ಜನರಲ್ಲಿ ನಾಲ್ವರು ಸಂತೋಷವಾಗಿದ್ದೇವೆಂದು ಹೇಳಿದ್ದಾರೆ. ಕೆಲಸದ ಕಾರಣ ಅವ್ರು ದೂರವಿರುತ್ತೇವೆಂದು ಹೇಳಿದ್ದಾರೆ.
ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರ ಪ್ರಕಾರ, ಕೆಲಸದ ಕಾರಣಕ್ಕೆ ಬೇರೆ ಊರಿಗೆ ಹೋಗ್ತೇವೆ. ಆಗಾಗ ಬೇರೆ ಊರಿಗೆ ಹೋಗುವುದ್ರಿಂದ ಸಂಗಾತಿಗಳು ಕೆಲ ದಿನ ಬೇರೆ ಬೇರೆಯಾಗಿರುತ್ತಾರೆ. ಮತ್ತೆ ಸೇರಿದಾಗ ಇಬ್ಬರ ಮಧ್ಯೆ ಪ್ರೀತಿ ಹೆಚ್ಚಾಗುತ್ತದೆ. ಇಬ್ಬರ ಮಹತ್ವ ಅರಿವಾಗುತ್ತದೆ ಎಂದು ಜನರು ಹೇಳಿದ್ದಾರೆ.
ಸಮೀಕ್ಷೆಯಲ್ಲಿ ಶೇಕಡಾ 10ರಷ್ಟು ಮಂದಿ, ಕೆಲ ದಿನ ಮನೆಯಿಂದ ಹೊರಗೆ ದೊಡ್ಡ ಹೊಟೇಲ್ ರೂಮಿನಲ್ಲಿ ಏಕಾಂಗಿಯಾಗಿದ್ರೆ ಹಿತವೆನಿಸುತದೆ. ಒತ್ತಡ ಕಡಿಮೆಯಗುತ್ತದೆ. ಮನಸ್ಸು ಉಲ್ಲಾಸಗೊಳ್ಳುತ್ತದೆ ಎಂದಿದ್ದಾರೆ.