ಶಾರೀರಿಕ ಸಂಬಂಧದ ಬಗ್ಗೆಯೂ ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ಪತಿ-ಪತ್ನಿ ನಡುವೆ ಗಲಾಟೆಯಾಗಲು ವಾಸ್ತು ಶಾಸ್ತ್ರವೇ ಕಾರಣ. ಮಲಗುವ ಕೋಣೆ ಕೂಡ ದಂಪತಿ ಆರೋಗ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ವಾಸ್ತು ಶಾಸ್ತ್ರದ ಪ್ರಕಾರವೇ ಮಲಗುವ ಕೋಣೆ ಹಾಗೂ ದಿಕ್ಕಿನ ಬಗ್ಗೆ ಗಮನ ನೀಡಬೇಕಾಗುತ್ತದೆ.
ಮಲಗುವ ಕೋಣೆ ಆಗ್ನೇಯ ದಿಕ್ಕಿನಲ್ಲಿರಬಾರದು ಎನ್ನುತ್ತದೆ ವಾಸ್ತು ಶಾಸ್ತ್ರ. ಆಗ್ನೇಯ ದಿಕ್ಕಿನಲ್ಲಿದ್ದರೆ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ. ಕೋಪ ಮತ್ತು ಒತ್ತಡ ಜಾಸ್ತಿಯಾಗುತ್ತದೆ. ಮಲಗುವ ಕೋಣೆಯನ್ನು ಬದಲಾಯಿಸಲು ಸಾಧ್ಯವಿಲ್ಲವೆಂದಾದಲ್ಲಿ ಮಲಗುವ ದಿಕ್ಕನ್ನು ಬದಲಾಯಿಸಿ. ನಿಮ್ಮ ತಲೆ ದಕ್ಷಿಣ ಭಾಗಕ್ಕೆ ಬರುವಂತೆ ನೋಡಿಕೊಳ್ಳಿ.
ಆಗ್ನೇಯ ದಿಕ್ಕಿನಲ್ಲಿ ಮಲಗುವ ಕೋಣೆಯಿದ್ದರೆ ಖರ್ಚು ಹೆಚ್ಚಾಗುತ್ತದೆ. ಕಾರಣವಿಲ್ಲದೆ ಜಗಳವಾಗುತ್ತದೆ. ದುಷ್ಟ ಮನಸ್ಸು ಜಾಗೃತವಾಗಿ ಕಲಹ ಜಾಸ್ತಿಯಾಗುತ್ತದೆ.
ಆಗ್ನೇಯ ದಿಕ್ಕಿನಲ್ಲಿ ಒಂದಾಗುವುದರಿಂದ ಕೋಪ ಜಾಸ್ತಿಯಾಗಿ ಸಂಬಂಧ ಹಾಳಾಗುತ್ತದೆ. ಕೇವಲ ದಂಪತಿ ನಡುವೆ ಮಾತ್ರವಲ್ಲ ತಂದೆ-ಮಗನ ನಡುವೆಯೂ ಸಂಬಂಧ ಹಾಳಾಗುವ ಸಂಭವ ಜಾಸ್ತಿ.